ಆಗ ದಾವೀ ದನು ಅವನಿಗೆ--ಕರ್ತನ ಅಭಿಷಿಕ್ತನನ್ನು ಸಂಹರಿಸಲು ನಿನ್ನ ಕೈಚಾಚುವದಕ್ಕೆ ಭಯಪಡದೆ ಇದ್ದದ್ದು ಹೇಗೆ ಎಂದು ಹೇಳಿದನು.
12ಸೌಲನೂ ಅವನ ಮಗನಾದ ಯೋನಾತಾನನೂ ಇಸ್ರಾಯೇಲಿನ ಮನೆಯವರೂ ಕರ್ತನ ಜನರೂ ಕತ್ತಿಯಿಂದ ಬಿದ್ದ ಕಾರಣ ಅವರಿ ಗೋಸ್ಕರ ಗೋಳಾಡಿ ಅತ್ತು ಸಾಯಂಕಾಲದ ವರೆಗೂ ಉಪವಾಸವಾಗಿದ್ದರು.
13ಆದರೆ ದಾವೀದನು ಅದನ್ನು ತನಗೆ ತಿಳಿಸಿದ ಯೌವನಸ್ಥನನ್ನು--ನೀನು ಎಲ್ಲಿಯ ವನು ಎಂದು ಕೇಳಿದಾಗ ಅವನು--ನಾನು ಅನ್ಯನ ಮಗನಾದ ಅಮಾಲೇಕ್ಯನು ಅಂದನು.
14ಆಗ ದಾವೀ ದನು ಅವನಿಗೆ--ಕರ್ತನ ಅಭಿಷಿಕ್ತನನ್ನು ಸಂಹರಿಸಲು ನಿನ್ನ ಕೈಚಾಚುವದಕ್ಕೆ ಭಯಪಡದೆ ಇದ್ದದ್ದು ಹೇಗೆ ಎಂದು ಹೇಳಿದನು.
15ದಾವೀದನು ಯೌವನಸ್ಥ ನೊಬ್ಬನನ್ನು ಕರೆದು--ನೀನು ಹತ್ತಿರ ಹೋಗಿ ಅವನ ಮೇಲೆ ಬೀಳು ಅಂದನು. ಹಾಗೆಯೇ ಅವನು ಅವನನ್ನು ಹೊಡೆದನು; ಅವನು ಸತ್ತನು.
16ದಾವೀದನು ಅವ ನಿಗೆ--ಕರ್ತನ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯಿ ನಿನಗೆ ವಿರೋಧವಾಗಿ ಸಾಕ್ಷಿಹೇಳಿದ್ದರಿಂದ ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರಲಿ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ