೨ ಕೊರಿಂಥದವರಿಗೆ 4:13

ಹೀಗಿದ್ದರೂ--ನಾನು ನಂಬಿದೆನು, ಆದದರಿಂದ ಮಾತನಾಡಿದೆನು ಎಂದು ಬರೆಯಲ್ಪಟ್ಟಿರುವ ಪ್ರಕಾರ ನಂಬಿಕೆಯ ಆತ್ಮವನ್ನೇ ಹೊಂದಿ ನಾವು ಸಹ ನಂಬುತ್ತೇವೆ; ಆದದರಿಂದ ಮಾತನಾಡುತ್ತೇವೆ.

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 4

11ಯಾಕಂದರೆ ಯೇಸುವಿನ ಜೀವವು ಸಹ ನಮ್ಮ ಮರ್ತ್ಯ ಶರೀರದಲ್ಲಿ ಉಂಟೆಂದು ತೋರಿ ಬರುವದಕ್ಕಾಗಿ ಬದುಕಿರುವ ನಾವು ಯೇಸುವಿನ ನಿಮಿತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ.

12ಹೀಗೆ ನಮ್ಮಲ್ಲಿ ಮರಣವೂ ನಿಮ್ಮಲ್ಲಿ ಜೀವವೂ ಪ್ರವರ್ತಿಸುತ್ತದೆ.

13ಹೀಗಿದ್ದರೂ--ನಾನು ನಂಬಿದೆನು, ಆದದರಿಂದ ಮಾತನಾಡಿದೆನು ಎಂದು ಬರೆಯಲ್ಪಟ್ಟಿರುವ ಪ್ರಕಾರ ನಂಬಿಕೆಯ ಆತ್ಮವನ್ನೇ ಹೊಂದಿ ನಾವು ಸಹ ನಂಬುತ್ತೇವೆ; ಆದದರಿಂದ ಮಾತನಾಡುತ್ತೇವೆ.

14ಕರ್ತನಾದ ಯೇಸುವನ್ನು ಎಬ್ಬಿಸಿದಾತನು ನಮ್ಮನ್ನು ಸಹ ಯೇಸುವಿನ ಮುಖಾಂತರ ಎಬ್ಬಿಸಿ ನಿಮ್ಮ ಜೊತೆಯಲ್ಲಿ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ.

15ಅವೆಲ್ಲವುಗಳು ನಿಮಗಾಗಿಯೇ ಇರುತ್ತವೆ; ಅವು ಗಳಲ್ಲಿ ಅಧಿಕವಾಗಿ ದೊರಕುವ ಕೃಪೆಯು ಬಹುಜನ ರೊಳಗೆ ಕೃತಜ್ಞತೆಯನ್ನು ಹುಟ್ಟಿಸುವದರಿಂದ ದೇವರಿಗೆ ಹೆಚ್ಚಾದ ಮಹಿಮೆಯನ್ನು ಉಂಟು ಮಾಡುವದು.

೨ ಕೊರಿಂಥದವರಿಗೆ 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी