ಯಾಜಕಕಾಂಡ 13:56

ಯಾಜಕನು ಅದನ್ನು ನೋಡಿದರೆ ಇಗೋ, ವ್ಯಾಧಿಯು ತೊಳೆಯಲ್ಪಟ್ಟ ನಂತರ ಸ್ವಲ್ಪ ಮೊಬ್ಬಾ ಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ ಚರ್ಮ ದಿಂದಾಗಲಿ ಹಾಸಿನಿಂದಾಗಲಿ ಹೊಕ್ಕಿನಿಂದಾಗಲಿ ಹರಿ ದುಹಾಕಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 13

54ಯಾಜಕನು ಆ ವ್ಯಾಧಿಯಿರುವವನನ್ನು ತೊಳೆದುಕೊಳ್ಳುವಂತೆ ಆಜ್ಞಾಪಿಸಿ ಅದನ್ನು ಏಳು ದಿನ ಗಳು ಹೆಚ್ಚಾಗಿ ಮುಚ್ಚಿಡಬೇಕು.

55ಅದನ್ನು ತೊಳೆದಾದ ಮೇಲೆ ಯಾಜಕನು ಆ ವ್ಯಾಧಿಯನ್ನು ನೋಡಬೇಕು: ಇಗೋ, ವ್ಯಾಧಿಯು ತನ್ನ ಬಣ್ಣವನ್ನು ಬದಲಾಯಿಸದೆ ಹರಡದಿದ್ದರೆ ಅದು ಅಶುದ್ಧವಾಗಿರುವದು: ಅದು ಒಳಗಿನಿಂದಾಗಲಿ ಹೊರಗಿನಿಂದಾಗಲಿ ಒಳಗೆ ಕೊರೆ ಯುವದು. ನೀನು ಅದನ್ನು ಬೆಂಕಿಯಿಂದ ಸುಡಬೇಕು.

56ಯಾಜಕನು ಅದನ್ನು ನೋಡಿದರೆ ಇಗೋ, ವ್ಯಾಧಿಯು ತೊಳೆಯಲ್ಪಟ್ಟ ನಂತರ ಸ್ವಲ್ಪ ಮೊಬ್ಬಾ ಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ ಚರ್ಮ ದಿಂದಾಗಲಿ ಹಾಸಿನಿಂದಾಗಲಿ ಹೊಕ್ಕಿನಿಂದಾಗಲಿ ಹರಿ ದುಹಾಕಬೇಕು.

57ಅದು ಬಟ್ಟೆಯಲ್ಲಾಗಲಿ ಹಾಸಿ ನಲ್ಲಾಗಲಿ ಹೊಕ್ಕಿನಲ್ಲಾಗಲಿ ಇಲ್ಲವೆ ಚರ್ಮದ ಯಾವದರಲ್ಲಿಯಾಗಲಿ ಇನ್ನೂ ಕಂಡುಬಂದರೆ ಅದು ಹರಡುವ ವ್ಯಾಧಿ ಮತ್ತು ವ್ಯಾಧಿಯುಳ್ಳದ್ದನ್ನು ನೀನು ಬೆಂಕಿಯಿಂದ ಸುಡಬೇಕು.

58ನೀನು ತೊಳೆದ ಮೇಲೆ ಆ ವ್ಯಾಧಿಯು ಯಾವದರಿಂದ ಹೊರಟು ಹೋಯಿತೋ ಆ ಬಟ್ಟೆಯನ್ನೂ ಹಾಸನ್ನೂ ಹೊಕ್ಕನ್ನೂ ಇಲ್ಲವೆ ಚರ್ಮದ ಯಾವದೇ ವಸ್ತುವನ್ನೂ ಎರಡನೆಯ ಸಾರಿ ತೊಳೆಯಬೇಕು, ಆಗ ಅದು ಶುದ್ಧವಾಗಿರುವದು.

ಯಾಜಕಕಾಂಡ 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी