ಲೂಕನು 2:36

ಅಲ್ಲಿ ಅಸೇರನ ಗೋತ್ರದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿಯಿದ್ದಳು; ಅವಳು ಬಹು ಮುಪ್ಪಿನವಳು; ತನ್ನ ಕನ್ಯಾವಸ್ಥೆಯಿಂದ ಗಂಡನೊಂದಿಗೆ ಏಳು ವರುಷ ಜೀವಿಸಿದ್ದಳು.

ಸಂದರ್ಭದೊಂದಿಗೆ ಓದಿ · ಲೂಕನು 2

34ಸಿಮೆಯೋನನು ಅವರನ್ನು ಆಶೀರ್ವದಿಸಿ ಆತನ ತಾಯಿಯಾದ ಮರಿಯಳಿಗೆ-- ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವದಕ್ಕೂ ತಿರಿಗಿ ಏಳುವದಕ್ಕೂ ಎದುರು ಮಾತನಾಡುವದಕ್ಕೂ ಈ ಶಿಶುವು ಗುರುತಾಗಿರುವನು.

35ಅನೇಕರ ಹೃದಯ ಗಳ ಅಲೋಚನೆಗಳು ಪ್ರಕಟವಾಗುವವು. (ಹೌದು, ನಿನ್ನ ಸ್ವಂತ ಪ್ರಾಣವನ್ನು ಸಹ ಕತ್ತಿಯು ತಿವಿಯುವದು) ಅಂದನು.

36ಅಲ್ಲಿ ಅಸೇರನ ಗೋತ್ರದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿಯಿದ್ದಳು; ಅವಳು ಬಹು ಮುಪ್ಪಿನವಳು; ತನ್ನ ಕನ್ಯಾವಸ್ಥೆಯಿಂದ ಗಂಡನೊಂದಿಗೆ ಏಳು ವರುಷ ಜೀವಿಸಿದ್ದಳು.

37ಅವಳು ಹೆಚ್ಚು ಕಡಿಮೆ ಎಂಭತ್ತುನಾಲ್ಕು ವರುಷದ ವಿಧವೆ ಯಾಗಿದ್ದು ದೇವಾಲಯವನ್ನು ಬಿಟ್ಟು ಹೋಗದೆ ರಾತ್ರಿ ಹಗಲು ಉಪವಾಸಗಳಿಂದಲೂ ಪ್ರಾರ್ಥನೆಗಳಿಂ ದಲೂ ದೇವರನ್ನು ಸೇವಿಸುತ್ತಿದ್ದಳು.

38ಆ ಕ್ಷಣದಲ್ಲಿ ಅವಳು ಬಂದು ಕರ್ತನನ್ನು ಅದೇ ರೀತಿಯಾಗಿ ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಆತನ ವಿಷಯ ವಾಗಿ ಮಾತನಾಡಿದಳು.

ಲೂಕನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी