ಲೂಕನು 8:47

ಆ ಸ್ತ್ರೀಯು ತಾನು ಮರೆಯಾಗಿಲ್ಲವೆಂದು ತಿಳಿದು ನಡುಗುತ್ತಾ ಬಂದು ಆತನ ಮುಂದೆ ಬಿದ್ದು ಯಾವ ಕಾರಣದಿಂದ ಆಕೆಯು ಆತನನ್ನು ಮುಟ್ಟಿದ ಳೆಂದೂ ಹೇಗೆ ತಾನು ಕೂಡಲೆ ಸ್ವಸ್ಥಳಾದಳೆಂದೂ ಎಲ್ಲಾ ಜನರ ಮುಂದೆ ಆತನಿಗೆ ತಿಳಿಯಪಡಿಸಿದಳು.

ಸಂದರ್ಭದೊಂದಿಗೆ ಓದಿ · ಲೂಕನು 8

45ಆಗ ಯೇಸು--ನನ್ನನ್ನು ಮುಟ್ಟಿದವರು ಯಾರು ಅಂದನು. ಎಲ್ಲರೂ ಅಲ್ಲಗಳೆದಾಗ ಪೇತ್ರನು ಮತ್ತು ಅವನ ಕೂಡ ಇದ್ದವರು ಆತನಿಗೆ--ಬೋಧಕನೇ, ಸಮೂಹವು ನಿನ್ನನ್ನು ನೂಕುತ್ತಾ ನಿನ್ನ ಮೇಲೆ ಬೀಳುತ್ತಿರಲಾಗಿ ನೀನು--ನನ್ನನ್ನು ಯಾರು ಮುಟ್ಟಿದರು ಎಂದು ಕೇಳುತ್ತೀಯಲ್ಲಾ ಅಂದರು.

46ಆದರೆ ಯೇಸು--ಯಾರೋ ಒಬ್ಬರು ನನ್ನನ್ನು ಮುಟ್ಟಿದ್ದಾರೆ; ಯಾಕಂದರೆ ನನ್ನಿಂದ ಶಕ್ತಿಯು ಹೊರಟಿತೆಂದು ನನಗೆ ತಿಳಿಯಿತು ಅಂದನು.

47ಆ ಸ್ತ್ರೀಯು ತಾನು ಮರೆಯಾಗಿಲ್ಲವೆಂದು ತಿಳಿದು ನಡುಗುತ್ತಾ ಬಂದು ಆತನ ಮುಂದೆ ಬಿದ್ದು ಯಾವ ಕಾರಣದಿಂದ ಆಕೆಯು ಆತನನ್ನು ಮುಟ್ಟಿದ ಳೆಂದೂ ಹೇಗೆ ತಾನು ಕೂಡಲೆ ಸ್ವಸ್ಥಳಾದಳೆಂದೂ ಎಲ್ಲಾ ಜನರ ಮುಂದೆ ಆತನಿಗೆ ತಿಳಿಯಪಡಿಸಿದಳು.

48ಆಗ ಆತನು ಆಕೆಗೆ--ಮಗಳೇ, ಸಮಾಧಾನ ದಿಂದಿರು; ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥ ಮಾಡಿಯದೆ; ಸ್ವಸ್ಥಳಾಗಿ ಹೋಗು ಅಂದನು.

49ಆತನು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿ ರದ ಅಧಿಕಾರಿಯ ಮನೆಯಿಂದ ಒಬ್ಬನು ಬಂದು ಅವನಿಗೆ--ನಿನ್ನ ಮಗಳು ಸತ್ತಿದ್ದಾಳೆ, ಬೋಧಕನಿಗೆ ತೊಂದರೆ ಕೊಡಬೇಡ ಅಂದನು.

ಲೂಕನು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी