ಪ್ರಕಟನೆ 14:12

ದೇವರ ಆಜ್ಞೆ ಗಳನ್ನೂ ಯೇಸುವಿನ ಮೇಲಣ ನಂಬಿಕೆಯನ್ನೂ ಕಾಪಾಡುವ ಪರಿಶುದ್ಧರ ತಾಳ್ಮೆಯು ಇದರಲ್ಲಿ ಇರುತ್ತದೆ.

ಸಂದರ್ಭದೊಂದಿಗೆ ಓದಿ · ಪ್ರಕಟನೆ 14

10ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು.

11ಅವರ ಯಾತನೆಯ ಹೊಗೆಯು ಯುಗ ಯುಗಾಂತರಗಳಲ್ಲಿ ಏರುತ್ತಿರುವದು. ಆ ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡುವವರೂ ಅದರ ಹೆಸರಿನ ಗುರುತನ್ನು ಹಾಕಿಸಿಕೊಂಡಿರುವವರೂ ಹಗಲಿ ರುಳು ವಿಶ್ರಾಂತಿಯಿಲ್ಲದೆ ಇರುವರು ಎಂದು ಮಹಾ ಶಬ್ದದಿಂದ ಹೇಳಿದನು.

12ದೇವರ ಆಜ್ಞೆ ಗಳನ್ನೂ ಯೇಸುವಿನ ಮೇಲಣ ನಂಬಿಕೆಯನ್ನೂ ಕಾಪಾಡುವ ಪರಿಶುದ್ಧರ ತಾಳ್ಮೆಯು ಇದರಲ್ಲಿ ಇರುತ್ತದೆ.

13ಪರಲೋಕದಿಂದ ಬಂದ ಶಬ್ದವನ್ನು ನಾನು ಕೇಳಿ ದೆನು. ಅದು--ಇಂದಿನಿಂದ ಕರ್ತನಲ್ಲಿ ಯಾರಾರು ಸಾಯುವರೋ ಆ ಸತ್ತವರು ಧನ್ಯರು ಎಂಬದಾಗಿ ಬರೆ ಎಂದು ನನಗೆ ಹೇಳಿತು; ಹೌದು, ಅವರು ತಮ್ಮ ಪ್ರಯಾಸಗಳಿಂದ ವಿಶ್ರಮಿಸಿಕೊಳ್ಳುವರು, ಅವರ ಕ್ರಿಯೆಗಳು ಅವರನ್ನು ಹಿಂಬಾಲಿಸುತ್ತವೆ ಎಂದು ಆತ

14ಆಗ ಒಂದು ಬಿಳೀ ಮೇಘವನ್ನೂ ಆ ಮೇಘದ ಮೇಲೆ ಮನುಷ್ಯ ಕುಮಾರನಂತಿದ್ದ ಒಬ್ಬಾತನು ಕೂತಿರುವುದನ್ನೂ ನಾನು ಕಂಡೆನು; ಆತನ ತಲೆಯ ಮೇಲೆ ಬಂಗಾರದ ಕಿರೀಟವಿತ್ತು; ಆತನ ಕೈಯಲ್ಲಿ ಹದವಾದ ಕುಡುಗೋಲು ಇತ್ತು.

ಪ್ರಕಟನೆ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी