ಯೆಹೆಜ್ಕೇಲನು 1:9

ಅವುಗಳ ರೆಕ್ಕೆಗಳು ಒಂದಕ್ಕೊಂದು ಜೋಡಿಸಲ್ಪಟ್ಟು ಅವು ಹೋಗುವಾಗ ತಿರುಗಿಕೊಳ್ಳದೆ ಪ್ರತಿಯೊಂದು ನೆಟ್ಟಗೆ ಮುಂದಕ್ಕೆ ಹೋದವು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 1

7ಅವುಗಳ ಕಾಲುಗಳು ನೆಟ್ಟಗಿದ್ದವು; ಅವುಗಳ ಅಂಗಾಲು ಕರುವಿನ ಪಾದದ ಹಾಗಿದ್ದು ಹಿತ್ತಾಳೆಗೆ ಮೆರುಗು ಕೊಟ್ಟ ಬಣ್ಣದ ಹಾಗೆ ಅವು ಥಳಥಳಿಸುತ್ತಿದ್ದವು.

8ಅವುಗಳಿಗೆ ರೆಕ್ಕೆಗಳ ಕೆಳಗೆ ಅವುಗಳ ನಾಲ್ಕು ಪಕ್ಕೆಗಳ ಮೇಲೆ ಮನುಷ್ಯನ ಕೈಗಳು ಇದ್ದವು; ಮತ್ತು ಆ ನಾಲ್ಕಕ್ಕೂ ಮುಖಗಳು, ರೆಕ್ಕೆಗಳು ಇದ್ದವು.

9ಅವುಗಳ ರೆಕ್ಕೆಗಳು ಒಂದಕ್ಕೊಂದು ಜೋಡಿಸಲ್ಪಟ್ಟು ಅವು ಹೋಗುವಾಗ ತಿರುಗಿಕೊಳ್ಳದೆ ಪ್ರತಿಯೊಂದು ನೆಟ್ಟಗೆ ಮುಂದಕ್ಕೆ ಹೋದವು.

10ಅವು ಗಳ ಮುಖಗಳ ರೂಪದ ಪ್ರಕಾರ ಅವು ನಾಲ್ಕು ಜೀವಿಗಳು ಮನುಷ್ಯನ ರೂಪದ ಮುಖವನ್ನು ಹೊಂದಿದ್ದವು; ಬಲಗಡೆಯಲ್ಲಿ ಸಿಂಹದ ಮುಖವೂ ಎಡಗಡೆ ಯಲ್ಲಿ ಎತ್ತಿನ ಮುಖವೂ ಆ ನಾಲ್ಕಕ್ಕೆ ಹದ್ದಿನ ಮುಖವೂ ಇತ್ತು.

11ಅವುಗಳ ಮುಖಗಳು ಹೀಗಿದ್ದವು; ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಲ್ಪಟ್ಟು ಪ್ರತಿಯೊಂದಕ್ಕೂ ಎರಡು ರೆಕ್ಕೆಗಳಿದ್ದು ಒಂದಕ್ಕೊಂದು ಅಂಟಿಕೊಂಡಿದ್ದವು; ಮಿಕ್ಕ ಎರಡು ಅವುಗಳ ದೇಹವನ್ನು ಮುಚ್ಚಿಕೊಂಡಿದ್ದವು.

ಯೆಹೆಜ್ಕೇಲನು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी