ಯೆಹೂದದ ಮಕ್ಕಳನ್ನೂ ಯೆರೂಸಲೇಮಿನ ಮಕ್ಕ ಳನ್ನೂ ತಮ್ಮ ಪ್ರಾಂತ್ಯಗಳಿಂದ ದೂರ ಮಾಡುವ ಹಾಗೆ ಗ್ರೀಕರಿಗೆ ಮಾರಿದ್ದೀರಿ.
4ಹೌದು, ಓ ತೂರೇ, ಚೀದೋನೇ, ಪಾಲೆಸ್ತಿನದ ಎಲ್ಲಾ ಪ್ರಾಂತ್ಯಗಳೇ, ನನ್ನ ಕೂಡ ನಿಮಗೇನು? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ನನಗೆ ಸಲ್ಲಿಸಿದರೆ ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು.
5ನೀವು ನನ್ನ ಬೆಳ್ಳಿಯನ್ನೂ ನನ್ನ ಬಂಗಾರವನ್ನೂ ತೆಗೆದುಕೊಂಡು ನನ್ನ ಒಳ್ಳೇ ರಮ್ಯವಾದವುಗಳನ್ನು ನಿಮ್ಮ ದೇವಸ್ಥಾನಗಳಿಗೆ ತಕ್ಕೊಂಡು ಹೋಗಿದ್ದೀರಿ.
6ಯೆಹೂದದ ಮಕ್ಕಳನ್ನೂ ಯೆರೂಸಲೇಮಿನ ಮಕ್ಕ ಳನ್ನೂ ತಮ್ಮ ಪ್ರಾಂತ್ಯಗಳಿಂದ ದೂರ ಮಾಡುವ ಹಾಗೆ ಗ್ರೀಕರಿಗೆ ಮಾರಿದ್ದೀರಿ.
7ಇಗೋ, ಎಲ್ಲಿ ಅವ ರನ್ನು ಮಾರಿದ್ದಿರೋ ಆ ಸ್ಥಳದಿಂದ ನಾನು ಅವರನ್ನು ಎಬ್ಬಿಸಿ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು.
8ನಿಮ್ಮ ಕುಮಾರರನ್ನೂ ನಿಮ್ಮ ಕುಮಾರ್ತೆ ಯರನ್ನೂ ಯೆಹೂದನ ಮಕ್ಕಳ ಕೈಯಲ್ಲಿ ಮಾರುವೆನು; ಇವರು ಅವರನ್ನು ದೂರ ಜನವಾದ ಶೆಬದನರಿಗೆ ಮಾರುವರು; ಕರ್ತನು ಅದನ್ನು ಹೇಳಿದ್ದಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ