ಆಮೋಸ 1:6

ಕರ್ತನು ಹೀಗೆ ಹೇಳುತ್ತಾನೆ--ಗಾಜದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅದರ ದಂಡನೆಯ ಕಡೆಯಿಂದ ತಿರುಗಿಸಿಬಿಡುವದಿಲ್ಲ; ಅವ ರನ್ನು ಸೆರೆಗೆ ಒಪ್ಪಿಸುವದಕ್ಕಾಗಿ ಎದೋಮಿಗೆ ಎಲ್ಲಾ ಸೆರೆಯವರನ್ನು ಕರೆತಂದರು.

ಸಂದರ್ಭದೊಂದಿಗೆ ಓದಿ · ಆಮೋಸ 1

4ಆದರೆ ನಾನು ಹಜಾಯೇಲನ ಮನೆಯೊಳಗೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ನುಂಗಿಬಿಡುವದು.

5ನಾನು ದಮಸ್ಕದ ಅಡ್ಡ ದಂಡೆ ಯನ್ನು ಸಹ ಮುರಿಯುವೆನು; ಆವೆನ್‌ ತಗ್ಗಿನಿಂದ ನಿವಾಸಿಯನ್ನೂ ಎದೆನಿನ ಮನೆಯಿಂದ ರಾಜದಂಡ ಹಿಡಿಯುವನನ್ನೂ ಕಡಿದುಬಿಡುವೆನು; ಸಿರಿಯಾದ ಜನರು ಸೆರೆಯಾಗಿ ಕೀರಿಗೆ ಹೋಗುವರೆಂದು ಕರ್ತನು ಹೇಳುತ್ತಾನೆ.

6ಕರ್ತನು ಹೀಗೆ ಹೇಳುತ್ತಾನೆ--ಗಾಜದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅದರ ದಂಡನೆಯ ಕಡೆಯಿಂದ ತಿರುಗಿಸಿಬಿಡುವದಿಲ್ಲ; ಅವ ರನ್ನು ಸೆರೆಗೆ ಒಪ್ಪಿಸುವದಕ್ಕಾಗಿ ಎದೋಮಿಗೆ ಎಲ್ಲಾ ಸೆರೆಯವರನ್ನು ಕರೆತಂದರು.

7ಆದರೆ ನಾನು ಗಾಜದ ಗೋಡೆಯಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಅವರ ಅರಮನೆಗಳನ್ನು ನುಂಗಿಬಿಡುವದು.

8ಅಷ್ಡೋ ದಿನಿಂದ ನಿವಾಸಿಯನ್ನು ಅಷ್ಕೆಲೋನಿನಿಂದ ರಾಜದಂಡ ಹಿಡಿಯುವವನನ್ನು ಕಡಿದುಬಿಟ್ಟು ನಾನು ಎಕ್ರೋನಿಗೆ ವಿರೋಧವಾಗಿ ನನ್ನ ಕೈಯನ್ನು ತಿರುಗಿಸುತ್ತೇನೆ. ಉಳಿದ ಫಿಲಿಪ್ಪಿಯರು ನಾಶವಾಗುವರೆಂದು ಕರ್ತನಾದ ದೇವರು ಹೇಳುತ್ತಾನೆ.

ಆಮೋಸ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी