ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕ ಒಪ್ಪಿಸಬೇಕು.
10ಆದರೆ ನೀನು ನಿನ್ನ ಸಹೋದರನಿಗೆ ತೀರ್ಪುಮಾಡುವದು ಯಾಕೆ? ಇಲ್ಲವೆ ನಿನ್ನ ಸಹೋದರನನ್ನು ಹೀನೈಸುವದು ಯಾಕೆ? ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ನಿಂತುಕೊಳ್ಳಬೇಕಲ್ಲಾ.
11ನನ್ನ ಜೀವದಾಣೆ, ಪ್ರತಿಯೊಬ್ಬನು ನನ್ನ ಮುಂದೆ ಮೊಣಕಾಲೂರುವನು ಮತ್ತು ಪ್ರತಿಯೊಂದು ನಾಲಿಗೆಯು ದೇವರಿಗೆ ಅರಿಕೆ ಮಾಡುವದು ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಬರೆದದೆ.
12ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕ ಒಪ್ಪಿಸಬೇಕು.
13ಆದಕಾರಣ ಇನ್ನು ಮೇಲೆ ಒಬ್ಬರ ವಿಷಯದ ಲ್ಲೊಬ್ಬರು ಎಂದಿಗೂ ತೀರ್ಪು ಮಾಡದೆ ಇರೋಣ; ಇದಲ್ಲದೆ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ ಎಡೆತಡೆಯನ್ನಾಗಲಿ ಹಾಕಲೇಬಾರದೆಂದು ತೀರ್ಮಾನಿ ಸಿಕೊಳ್ಳಿರಿ.
14ಯಾವ ಪದಾರ್ಥವೂ ಸ್ವತಃ ಅಶುದ್ಧ ವಾದದ್ದಲ್ಲವೆಂದು ನಾನು ಬಲ್ಲೆನು, ಇದನ್ನು ನಾನು ಕರ್ತನಾದ ಯೇಸುವಿನ ಮುಖಾಂತರ ದೃಢವಾಗಿ ನಂಬಿದ್ದೇನೆ; ಆದರೆ ಯಾವದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವೇ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ