೨ ಕೊರಿಂಥದವರಿಗೆ 10:3

ನಾವು ಶರೀರದಲ್ಲಿ ನಡ ಕೊಳ್ಳುವವರಾದರೂ ಶರೀರ ಪ್ರಕಾರವಾಗಿ ಯುದ್ಧ ಮಾಡುವವರಲ್ಲ.

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 10

1ನಿಮ್ಮೆದುರಿನಲ್ಲಿರುವಾಗ ದೀನನಾಗಿಯೂ ದೂರದಲ್ಲಿರುವಾಗ ನಿಮ್ಮ ಕಡೆಗೆ ದಿಟ್ಟತನ ತೋರಿಸುವವನಾಗಿಯೂ ಆಗಿದ್ದಾನೆಂದು ನೀವು ತಿಳಿಯುವ ಪೌಲನೆಂಬ ನಾನೇ ಕ್ರಿಸ್ತನ ಶಾಂತ ಮನಸ್ಸಿನಿಂದಲೂ ಸಾತ್ವಿಕತ್ವದಿಂದಲೂ ನಿಮ್ಮನ್ನು ಬೇಡಿಕೊಳ್ಳುತ್ತೇನೆ.

2ಯಾರು ನಮ್ಮನ್ನು ಶರೀರಾ ನುಸಾರವಾಗಿ ಎಣಿಸುತ್ತಾರೋ ಅವರಿಗೆ ದಿಟ್ಟತನವನ್ನು ತೋರಿಸಬೇಕೆಂದು ನಾನು ಯೋಚಿಸುತ್ತಾ ಇದ್ದೇನೆ: ನಾವು ನಿಮ್ಮಲ್ಲಿಗೆ ಬಂದಿರುವಾಗ ಅಂಥ ದಿಟ್ಟತನವನ್ನು ತೋರಿಸುವದಕ್ಕೆ ಅವಕಾಶವಾಗಬಾರದೆಂದು ನಿಮ್ಮನು ಬೇಡಿಕೊಳ್ಳುತ್ತೇನೆ.

3ನಾವು ಶರೀರದಲ್ಲಿ ನಡ ಕೊಳ್ಳುವವರಾದರೂ ಶರೀರ ಪ್ರಕಾರವಾಗಿ ಯುದ್ಧ ಮಾಡುವವರಲ್ಲ.

4(ನಾವು ಉಪಯೋಗಿಸುವ ಯುದ್ಧಾಯುಧಗಳು ಶರೀರ ಸಂಬಂಧವಾದ ಆಯುಧ ಗಳಲ್ಲ; ಅವು ದೇವರ ಮೂಲಕ ಬಲವಾಗಿದ್ದು ಬಲ ವಾದ ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ).

5ನಾವು ಊಹೆಗಳನ್ನು ದೇವಜ್ಞಾನವನ್ನೂ ವಿರೋಧಿ ಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದವುಗಳೆಲ್ಲವನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು

೨ ಕೊರಿಂಥದವರಿಗೆ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी