ಯೆಹೆಜ್ಕೇಲನು 3:21

ಆದಾಗ್ಯೂ ನೀತಿವಂತನು ಪಾಪ ಮಾಡದ ಹಾಗೆ ನೀನು ನೀತಿವಂತನನ್ನು ಎಚ್ಚರಿಸುವಾಗ ಅವನು ಪಾಪಮಾಡದೆ ಎಚ್ಚರಿಕೆಯಾದದರಿಂದ ನಿಶ್ಚಯವಾಗಿ ಬದುಕುವನು; ನೀನು ನಿನ್ನ ಪ್ರಾಣವನ್ನು ಸಹ ಉಳಿಸಿಕೊಂಡಿರುವಿ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 3

19ಆದರೆ ನೀನು ದುಷ್ಟ ನನ್ನು ಎಚ್ಚರಿಸಿದ ಮೇಲೆ ಅವನು ತನ್ನ ದುಷ್ಟತ್ವವನ್ನೂ ದುಷ್ಟಮಾರ್ಗವನ್ನೂ ಬಿಟ್ಟು ತಿರುಗದೆ ಹೋದರೆ ಅವನು ತನ್ನ ದುಷ್ಟತ್ವದಲ್ಲಿಯೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ.

20ಮತ್ತೆ ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡಚಣೆಯನ್ನು ಇಡುವೆನು, ಅವನು ಸಾಯು ವನು; ನೀನು ಅವನನ್ನು ಎಚ್ಚರಿಸದೆ ಇದ್ದದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು; ಅವನು ಮಾಡಿರುವ ಅವನ ನೀತಿಯು ಜ್ಞಾಪಕ ಮಾಡಲ್ಪಡು ವದಿಲ್ಲ; ಆದರೆ ಅವನ ರಕ್ತವನ್ನು ನಾನು ನಿನ್ನ ಕೈಯಿಂದ ವಿಚಾರಿಸುವೆನು;

21ಆದಾಗ್ಯೂ ನೀತಿವಂತನು ಪಾಪ ಮಾಡದ ಹಾಗೆ ನೀನು ನೀತಿವಂತನನ್ನು ಎಚ್ಚರಿಸುವಾಗ ಅವನು ಪಾಪಮಾಡದೆ ಎಚ್ಚರಿಕೆಯಾದದರಿಂದ ನಿಶ್ಚಯವಾಗಿ ಬದುಕುವನು; ನೀನು ನಿನ್ನ ಪ್ರಾಣವನ್ನು ಸಹ ಉಳಿಸಿಕೊಂಡಿರುವಿ.

22ಆಗ ಅಲ್ಲಿ ಕರ್ತನ ಹಸ್ತವು ನನ್ನ ಮೇಲಿತ್ತು; ನನಗೆ ಆತನು ಹೇಳಿದ್ದೇನಂದರೆ--ಎದ್ದೇಳು, ಬಯಲು ಸೀಮೆಗೆ ಹೋಗು ಅಲ್ಲಿ ನಾನು ನಿನ್ನ ಸಂಗಡ ಮಾತನಾಡುವೆನು ಅಂದನು.

23ಆಮೇಲೆ ನಾನು ಎದ್ದು ಬಯಲು ಸೀಮೆಯ ಕಡೆಗೆ ಹೋದೆನು; ಇಗೋ, ಕರ್ತನ ಮಹಿಮೆಯ ಅಲ್ಲಿ ನಿಂತಿದೆ. ಅದು ಕೆಬಾರ್‌ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿದೆ. ಆಗ ನಾನು ಮುಖ ಕೆಳಗಾಗಿ ಬಿದ್ದೆನು.

ಯೆಹೆಜ್ಕೇಲನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी