ಆದಿಕಾಂಡ 42:27

ಒಬ್ಬನು ತನ್ನ ಕತ್ತೆಗೆ ಆಹಾರವನ್ನು ಕೊಡುವದಕ್ಕಾಗಿ ವಸತಿ ಗೃಹದಲ್ಲಿ ತನ್ನ ಚೀಲವನ್ನು ಬಿಚ್ಚಿದಾಗ ಇಗೋ, ಚೀಲದ ಬಾಯಿಯಲ್ಲಿಟ್ಟಿದ ತನ್ನ ಹಣವನ್ನು ಕಂಡನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 42

25ತರುವಾಯ ಯೋಸೇಫನು ಧಾನ್ಯವನ್ನು ತುಂಬಿಸ ಬೇಕೆಂದೂ ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ತಿರಿಗಿ ಇಡಬೇಕೆಂದೂ ಹಾದಿಗೋಸ್ಕರ ಅವರಿಗೆ ಆಹಾರ ಸರಬರಾಜು ಮಾಡಬೇಕೆಂದೂ ಆಜ್ಞಾಪಿಸಿದನು. ಹೀಗೆಯೇ ಅವನು ಅವರಿಗೆ ಮಾಡಿ ದನು.

26ಆಗ ಅವರು ತಮ್ಮ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಅಲ್ಲಿಂದ ಹೋಗಿಬಿಟ್ಟರು.

27ಒಬ್ಬನು ತನ್ನ ಕತ್ತೆಗೆ ಆಹಾರವನ್ನು ಕೊಡುವದಕ್ಕಾಗಿ ವಸತಿ ಗೃಹದಲ್ಲಿ ತನ್ನ ಚೀಲವನ್ನು ಬಿಚ್ಚಿದಾಗ ಇಗೋ, ಚೀಲದ ಬಾಯಿಯಲ್ಲಿಟ್ಟಿದ ತನ್ನ ಹಣವನ್ನು ಕಂಡನು.

28ಅವನು ತನ್ನ ಸಹೋದರರಿಗೆ--ನನ್ನ ಹಣವು ಹಿಂದಕ್ಕೆ ಕೊಡಲ್ಪಟ್ಟಿದೆ. ಇಗೋ, ಅದು ನನ್ನ ಚೀಲದಲ್ಲಿದೆ ಅಂದಾಗ ಅವರಿಗೆ ಹೃದಯ ಕುಗ್ಗಿ ದಂತಾಗಿ ಹೆದರಿ ಒಬ್ಬರಿಗೊಬ್ಬರು--ದೇವರು ನಮಗೆ ಮಾಡಿದ್ದೇನು ಅಂದರು.

29ಅವರು ಕಾನಾನ್‌ ದೇಶಕ್ಕೆ ತಮ್ಮ ತಂದೆಯಾದ ಯಾಕೋಬನ ಬಳಿಗೆ ಬಂದು ತಮಗೆ ಸಂಭವಿಸಿದ್ದೆಲ್ಲ ವನ್ನು ಅವನಿಗೆ ತಿಳಿಸಿದರು. ಅದೇನಂದರೆ--

ಆದಿಕಾಂಡ 42 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी