ಪ್ರಲಾಪಗಳು 1:5

ಆಕೆಯ ವೈರಿಗಳು ಪ್ರಮುಖರಾದರು, ಶತ್ರುಗಳು ಅಭಿವೃದ್ಧಿಯಾಗಿ ದ್ದಾರೆ; ಅನೇಕ ಅಪರಾಧಗಳ ನಿಮಿತ್ತ ಕರ್ತನು ಆಕೆಯನ್ನು ಸಂಕಟಪಡಿಸಿದ್ದಾನೆ. ಆಕೆಯ ಮಕ್ಕಳು ಶತ್ರು ವಿನ ಮುಂದೆ ಸೆರೆಗೆ ಹೋಗಿದ್ದಾರೆ.

ಸಂದರ್ಭದೊಂದಿಗೆ ಓದಿ · ಪ್ರಲಾಪಗಳು 1

3ಯೆಹೂದವು ಸಂಕಟದ ನಿಮಿತ್ತವೂ ಘೋರವಾದ ದಾಸ್ಯದ ನಿಮಿತ್ತವೂ ಸೆರೆಯಾಗಿ ಹೋಯಿತು; ಆಕೆಯು ಅನ್ಯಜನಾಂಗಗಳೊಳಗೆ ವಾಸಮಾಡುವವಳಾಗಿ ವಿಶ್ರಾಂತಿಯನ್ನು ಕಾಣಳು; ಅವಳನ್ನು ಹಿಂಸಿಸುವವ ರೆಲ್ಲರೂ ಅವಳನ್ನು ಇಕ್ಕಟ್ಟಿನ ಮಧ್ಯದಲ್ಲಿ ಸಿಕ್ಕಿಸಿರುತ್ತಾರೆ.

4ಚೀಯೋನಿನ ಮಾರ್ಗಗಳು ದುಃಖಿಸುತ್ತವೆ, ಯಾಕಂದರೆ ಪವಿತ್ರ ಹಬ್ಬಗಳಿಗೆ ಯಾರೂ ಬರಲಿಲ್ಲ; ಆಕೆಯ ಎಲ್ಲಾ ಬಾಗಿಲುಗಳು ಹಾಳುಬಿದ್ದಿವೆ. ಯಾಜಕರು ನಿಟ್ಟುಸಿರಿಡುತ್ತಾರೆ, ಕನ್ಯೆಯರು ಸಂಕಟಪಡುತ್ತಾರೆ. ಆಕೆಯು ವ್ಯಥೆಯಲ್ಲಿದ್ದಾಳೆ.

5ಆಕೆಯ ವೈರಿಗಳು ಪ್ರಮುಖರಾದರು, ಶತ್ರುಗಳು ಅಭಿವೃದ್ಧಿಯಾಗಿ ದ್ದಾರೆ; ಅನೇಕ ಅಪರಾಧಗಳ ನಿಮಿತ್ತ ಕರ್ತನು ಆಕೆಯನ್ನು ಸಂಕಟಪಡಿಸಿದ್ದಾನೆ. ಆಕೆಯ ಮಕ್ಕಳು ಶತ್ರು ವಿನ ಮುಂದೆ ಸೆರೆಗೆ ಹೋಗಿದ್ದಾರೆ.

6ಚೀಯೋನಿನ ಮಗಳ ಎಲ್ಲಾ ಸೌಂದರ್ಯವು ಅವಳನ್ನು ಬಿಟ್ಟು ಹೋಯಿತು. ಅವಳ ಪ್ರಧಾನರು ಮೇವು ಕಾಣದ ಜಿಂಕೆಗಳ ಹಾಗಾದರು. ಅವರು ಹಿಂದಟ್ಟುವವನ ಮುಂದೆ ತ್ರಾಣವಿಲ್ಲದವರ ಹಾಗೆ ಹೋದರು.

7ಯೆರೂಸಲೇಮು ಕಷ್ಟ ಮತ್ತು ಸಂಕಟದಲ್ಲಿದ್ದಾಗ ಪೂರ್ವದಿನಗಳಲ್ಲಿ ತನಗಿದ್ದ ರಮ್ಯವಾದವುಗಳೆಲ್ಲವನ್ನು ಜ್ಞಾಪಕಮಾಡಿಕೊಂಡಿದ್ದಾಳೆ. ಆಕೆಯ ಜನರು ಶತ್ರುವಿನ ಕೈಯಲ್ಲಿ ಬಿದ್ದಾಗ ಯಾವನೂ ಸಹಾಯಮಾಡಲಿಲ್ಲ. ವೈರಿಗಳು ಅವಳನ್ನು ನೋಡಿ ಅವಳ ಸಬ್ಬತ್ತುಗಳ ವಿಷಯದಲ್ಲಿ ಅಪಹಾಸ್ಯಮಾಡಿದರು.

ಪ್ರಲಾಪಗಳು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी