ಹಷಬ್ಯನೂ ಅವನ ಸಂಗಡ ಮೆರಾರಿಯ ಕುಮಾರ ರಲ್ಲಿ ಯೆಶಾಯನೂ ಅವನ ಸಹೋದರರೂ ಅವರ ಕುಮಾರರರೂ ಆದ ಇಪ್ಪತ್ತು ಮಂದಿಯನ್ನೂ
17ಎಲ್ನಾತಾನನು ಎಂಬ ಗ್ರಹಿಕೆ ಯುಳ್ಳವರನ್ನೂ ಕರೇ ಕಳುಹಿಸಿ ಕಸಿಪ್ಯದಲ್ಲಿರುವ ಅಧಿ ಪತಿಯಾದ ಇದ್ದೋನನ ಬಳಿಗೆ ಅಪ್ಪಣೆಕೊಟ್ಟು ಕಳುಹಿಸಿ ಅವರು ನಮ್ಮ ದೇವರ ಆಲಯಕ್ಕೊಸ್ಕರ ಸೇವಕರನ್ನು ತರುವ ಹಾಗೆ ಅವರು ಕಾಸಿಪ್ಯವೆಂಬ ಸ್ಥಳದಲ್ಲಿರುವ ಇದ್ದೋವಿಗೂ ಅವನ ಸಹೋದರನಾದ ನೆತಿನಿಯರಿಗೂ ಹೇಳಬೇಕಾದದ್ದನ್ನು ತಿಳಿಸಿದೆನು.
18ನಮ್ಮ ದೇವರ ಒಳ್ಳೇ ಹಸ್ತವು ನಮ್ಮ ಮೇಲೆ ಇದ್ದದರಿಂದ ಅವರು ಇಸ್ರಾಯೇಲಿನ ಮಗನಾಗಿರುವ ಲೇವಿಯ ಮಗನಾದ ಮಹ್ಲೀಯ ಕುಮಾರರಲ್ಲಿ ಬುದ್ಧಿ ಯುಳ್ಳವನಾದ ಶೇರೇಬ್ಯನೂ ಅವನ ಕುಮಾರರೂ ಸಹೋದರರೂ ಆದ ಹದಿನೆಂಟು ಮಂದಿಯನ್ನೂ
19ಹಷಬ್ಯನೂ ಅವನ ಸಂಗಡ ಮೆರಾರಿಯ ಕುಮಾರ ರಲ್ಲಿ ಯೆಶಾಯನೂ ಅವನ ಸಹೋದರರೂ ಅವರ ಕುಮಾರರರೂ ಆದ ಇಪ್ಪತ್ತು ಮಂದಿಯನ್ನೂ
20ದಾವೀ ದನೂ ಪ್ರಧಾನರೂ ಲೇವಿಯರನ್ನು ಸೇವಿಸುವದಕ್ಕೆ ನೇಮಿಸಿದ ನೆತಿನಿಯರಲ್ಲಿ ಇನ್ನೂರ ಇಪ್ಪತ್ತು ಮಂದಿ ನೆತಿನಿಯರನ್ನೂ ನಮ್ಮ ಬಳಿಗೆ ಕರಕೊಂಡು ಬಂದರು. ಅವರೆಲ್ಲರೂ ಹೆಸರು ಹೆಸರಾಗಿ ಬರೆಯಲ್ಪಟ್ಟಿದ್ದರು.
21ಆಗ ನಾವು ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸುಕೊಳ್ಳುವದಕ್ಕೂ ನಮಗೂ ನಮ್ಮ ಮಕ್ಕಳಿಗೂ ನಮ್ಮ ಎಲ್ಲಾ ಸ್ಥಿತಿಗೂ ಆತನಿಂದ ಸರಿಯಾದ ಮಾರ್ಗ ವನ್ನು ಹುಡುಕುವದಕ್ಕೂ ನಾನು ಅಲ್ಲಿ ಅಹವಾ ನದಿಯ ಬಳಿಯಲ್ಲಿ ಉಪವಾಸವನ್ನು ಮಾಡಲು ಸಾರಿದೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ