ನಿನ್ನ ತಲೆಯ ಮೇಲೆ ಕೂಡ ಆಣೆ ಇಡಬೇಡ; ಯಾಕಂದರೆ ನೀನು ಒಂದು ಕೂದಲನ್ನಾದರೂ ಬಿಳಿ ಅಥವಾ ಕಪ್ಪು ಮಾಡಲಾರಿ.
34ಆದರೆ ನಾನು ನಿಮಗೆ ಹೇಳುವದೇನಂದರೆ--ಎಷ್ಟು ಮಾತ್ರಕ್ಕೂ ಅಣೆಯನ್ನು ಇಡಬೇಡ. ಪರಲೋಕದ ಮೇಲೆ ಬೇಡ; ಯಾಕಂದರೆ ಅದು ದೇವರ ಸಿಂಹಾಸನವು.
35ಭೂಮಿಯ ಮೇಲೆಯೂ ಬೇಡ; ಯಾಕಂದರೆ ಅದು ಆತನ ಪಾದಪೀಠವು; ಯೆರೂಸಲೇಮಿನ ಮೇಲೆಯೂ ಬೇಡ; ಯಾಕಂದರೆ ಅದು ಆ ಮಹಾ ಅರಸನ ಪಟ್ಟಣವಾಗಿದೆ.
36ನಿನ್ನ ತಲೆಯ ಮೇಲೆ ಕೂಡ ಆಣೆ ಇಡಬೇಡ; ಯಾಕಂದರೆ ನೀನು ಒಂದು ಕೂದಲನ್ನಾದರೂ ಬಿಳಿ ಅಥವಾ ಕಪ್ಪು ಮಾಡಲಾರಿ.
37ಆದರೆ ನಿನ್ನ ಮಾತು ಹೌದಾಗಿದ್ದರೆ ಹೌದು, ಅಲ್ಲವಾಗಿದ್ದರೆ ಅಲ್ಲ ಎಂದಿರಲಿ; ಇವುಗಳಿಗಿಂತ ಹೆಚ್ಚಾದದ್ದು ಕೆಟ್ಟದ್ದ ರಿಂದ ಬರುವಂಥದ್ದು.
38ಇದಲ್ಲದೆ--ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗಿಸು ಎಂದು ಹೇಳಿರುವದನ್ನು ನೀವು ಕೇಳಿದ್ದೀರಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ