ಆದಾಗ್ಯೂ ನಾನು ಅರೀಯೇಲಿಗೆ ಇಕ್ಕಟ್ಟನ್ನು ಉಂಟುಮಾಡುವೆನು. ಅಲ್ಲಿ ಕಷ್ಟವೂ ದುಃಖವೂ ಇರುವದು.
1ಅಯ್ಯೋ, ಅರೀಯೇಲೇ, ಅರೀಯೇಲೇ, (ಅಗ್ನಿವೇದಿ) ದಾವೀದನು ವಾಸಿಸಿದ ಪಟ್ಟ ಣವೇ ವರುಷಕ್ಕೆ ವರುಷವನ್ನು ಕೂಡಿಸಿರಿ, ಬಲಿಗಳನ್ನು ವಧಿಸಿ ಅರ್ಪಿಸಿರಿ.
2ಆದಾಗ್ಯೂ ನಾನು ಅರೀಯೇಲಿಗೆ ಇಕ್ಕಟ್ಟನ್ನು ಉಂಟುಮಾಡುವೆನು. ಅಲ್ಲಿ ಕಷ್ಟವೂ ದುಃಖವೂ ಇರುವದು.
3ಅದು ನನಗೆ ಅರೀಯೇಲಾಗಿಯೇ ಪರಿಣಮಿಸುವದು. ಸುತ್ತಲೂ ದಂಡಿಳಿಸಿ ನಿನಗೆ ವಿರುದ್ಧವಾಗಿ ಕೋಟೆಗಳನ್ನು ಎಬ್ಬಿಸಿ ದಿಬ್ಬಹಾಕಿ ನಿನ್ನ ಮೇಲೆ ಮುತ್ತಿಗೆ ಹಾಕುವೆನು.
4ಆಗ ನೀನು ತಗ್ಗಿಸಲ್ಪಟ್ಟು ಭೂಮಿಯೊಳಗಿಂದ ಮಾತಾಡುವಿ. ನಿನ್ನ ನುಡಿಯು ದೂಳಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವದು, ನಿನ್ನ ಸ್ವರವು ಭೂತದ ಹಾಗೆ ನೆಲದೊಳಗಿಂದ ಬರು ವದು; ನಿನ್ನ ನುಡಿಯು ದೂಳಿನೊಳಗಿಂದ ಪಿಸುಗುಟ್ಟು ವದು;
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ