೧ ಅರಸುಗಳು 13:3

ಅದೇ ದಿವಸದಲ್ಲಿ ಅವನು ಗುರುತನ್ನು ಕೊಟ್ಟು ಅವರಿಗೆ--ಕರ್ತನು ಇದಕ್ಕೆ ಹೇಳಿದ ಗುರುತೇ ನಂದರೆ--ಇಗೋ, ಬಲಿಪೀಠವು ಸೀಳಿಹೋಗಿ ಅದರ ಮೇಲೆ ಇರುವ ಬೂದಿಯು ಚೆಲ್ಲಲ್ಪಡುವದು ಅಂದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 13

1ಯಾರೊಬ್ಬಾಮನು ಧೂಪವನ್ನರ್ಪಿಸಲು ಬಲಿಪೀಠದ ಬಳಿಯಲ್ಲಿ ನಿಂತಿರುವಾಗ ಇಗೋ, ಕರ್ತನ ಮಾತಿನಂತೆ ದೇವರ ಮನುಷ್ಯನು ಯೆಹೂದದಿಂದ ಬೇತೇಲಿಗೆ ಬಂದನು.

2ಅವನು ಆ ಪೀಠಕ್ಕೆ ವಿರೋಧವಾಗಿ ಕರ್ತನ ಮಾತಿನಲ್ಲಿ ಕೂಗಿ--ಪೀಠವೇ, ಪೀಠವೇ, ಇಗೋ, ದಾವೀದನ ಸಂತಾನದಲ್ಲಿ ಯೋಷೀಯನೆಂದು ಹೆಸರುಳ್ಳ ಒಬ್ಬ ಕುಮಾರನು ಹುಟ್ಟುವನು; ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಉನ್ನತ ಸ್ಥಳಗಳ ಯಾಜಕರನ್ನು ಬಲಿಯಾಗಿ ಅರ್ಪಿಸುವನು; ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವೆಂದು ಕರ್ತನು ಹೇಳುತ್ತಾನೆ ಅಂದನು.

3ಅದೇ ದಿವಸದಲ್ಲಿ ಅವನು ಗುರುತನ್ನು ಕೊಟ್ಟು ಅವರಿಗೆ--ಕರ್ತನು ಇದಕ್ಕೆ ಹೇಳಿದ ಗುರುತೇ ನಂದರೆ--ಇಗೋ, ಬಲಿಪೀಠವು ಸೀಳಿಹೋಗಿ ಅದರ ಮೇಲೆ ಇರುವ ಬೂದಿಯು ಚೆಲ್ಲಲ್ಪಡುವದು ಅಂದನು.

4ಅರಸನಾದ ಯಾರೊಬ್ಬಾಮನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿ ದೇವರ ಮನುಷ್ಯನು ಕೂಗಿದ ಮಾತನ್ನು ಕೇಳಿದಾಗ ಅವನು ಪೀಠದ ಬಳಿ ಯಿಂದ ತನ್ನ ಕೈಚಾಚಿ--ಅವನನ್ನು ಹಿಡಿಯಿರಿ ಅಂದನು. ಆಗ ಅವನಿಗೆ ವಿರೋಧವಾಗಿ ಚಾಚಿದ ಅವನ ಕೈ ಹಿಂದಕ್ಕೆ ಎಳಕೊಳ್ಳದ ಹಾಗೆ ಒಣಗಿಹೋಯಿತು.

5ಇದಲ್ಲದೆ ಕರ್ತನ ಮಾತಿನಿಂದ ದೇವರ ಮನುಷ್ಯನು ಕೊಟ್ಟ ಗುರುತಿನ ಪ್ರಕಾರವೇ ಬಲಿ ಪೀಠವು ಸೀಳಿ ಹೋಗಿ ಬೂದಿಯು ಬಲಿಪೀಠದಿಂದ ಚೆಲ್ಲಲ್ಪಟ್ಟಿತು.

೧ ಅರಸುಗಳು 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी