ಸಿರಿಯಾದವರೂ ಎಫ್ರಾಯಿಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ದುರಾಲೋಚನೆ ಮಾಡಿ,
3ಆಗ ಕರ್ತನು, ಯೆಶಾಯನಿಗೆ--ನೀನು ಶೆಯಾರ್ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡು ಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಂಡು ಅವನಿಗೆ ಹೀಗೆ ಹೇಳು--
4ಜಾಗ ರೂಕನಾಗಿ ಸುಮ್ಮನಿರು; ಭಯಪಡಬೇಡ ಇಲ್ಲವೆ ರೆಚೀನ ಅರಾಮ್ಯ ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟು ಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.
5ಸಿರಿಯಾದವರೂ ಎಫ್ರಾಯಿಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ದುರಾಲೋಚನೆ ಮಾಡಿ,
6ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ ಅದನ್ನು ವ್ಯಥೆಪಡಿಸಿ ಅದರಲ್ಲಿ ನಮಗಾಗಿ ಮಾಡಿ ಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೇಲನ ಮಗನನ್ನು ನೇಮಿಸಿಕೊಳ್ಳೋಣ ಎಂದು ಹೇಳುವರು
7ಅದಕ್ಕೆ ಕರ್ತನಾದ ದೇವರು--ಅದು ನಿಲ್ಲುವದಿಲ್ಲ; ಇಲ್ಲವೆ ಅದು ಆಗುವದೇ ಇಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ