ನಿಯಮಿತ ಕಾಲದಲ್ಲಿಯೇ ಅವನು ಹಿಂತಿರುಗಿ ದಕ್ಷಿಣಕ್ಕೆ ಬರುವನು; ಆದರೆ ಮೊದಲು ಆದಂತೆ ಎರಡನೆಯ ಸಾರಿ ಆಗುವದಿಲ್ಲ.
27ಈ ಇಬ್ಬರು ಅರಸರ ಹೃದಯ ಗಳನ್ನು ಕೇಡನ್ನು ಮಾಡುವಂತವುಗಳಾಗಿರುವವು; ಒಂದೇ ಮೇಜಿನಲ್ಲಿ ಕುಳಿತು ಸುಳ್ಳು ಹೇಳುವರು; ಆದರೆ ಅದು ಅನುಕೂಲವಾಗದು; ಅದು ಹೇಗಾದರೂ ನಿಯಮಿಸಲ್ಪಟ್ಟ ಕಾಲದಲ್ಲಿ ಅಂತ್ಯವಾಗುವದು.
28ಆಗ ಅವನು ಮಹಾ ಐಶ್ವರ್ಯದೊಂದಿಗೆ ಸ್ವದೇಶಕ್ಕೆ ಹಿಂತಿರುಗವನು; ಅವನ ಹೃದಯವು ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿರುವದು; ಅವನು ಹೀಗೆ ಕಾರ್ಯ ಸಾಧಿಸಿ ಸ್ವಂತ ದೇಶಕ್ಕೆ ಹಿಂತಿರುಗುವನು.
29ನಿಯಮಿತ ಕಾಲದಲ್ಲಿಯೇ ಅವನು ಹಿಂತಿರುಗಿ ದಕ್ಷಿಣಕ್ಕೆ ಬರುವನು; ಆದರೆ ಮೊದಲು ಆದಂತೆ ಎರಡನೆಯ ಸಾರಿ ಆಗುವದಿಲ್ಲ.
30ಕಿತ್ತೀಮಿನ ಹಡಗು ಗಳು ಅವನಿಗೆ ವಿರೋಧವಾಗಿ ಬರುವವು. ಆದದರಿಂದ ಅವನು ಎದೆಗುಂದಿ ಪರಿಶುದ್ಧ ಒಡಂಬಡಿಕೆಗೆ ವಿರೋಧ ವಾಗಿ ಅವನು ಕೋಪಿಸಿ ಹೀಗೆ ಮಾಡುವನು. ಹಿಂತಿರುಗಿ ಸೇರಿ ಪರಿಶುದ್ಧ ಒಡಂಬಡಿಕೆಯನ್ನು ತೊರೆದವನ ಸಂಗಡ ಜ್ಞಾನಿಯಾಗುವನು.
31ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯ ಯಜ್ಞವನ್ನು ನೀಗಿಸಿ, ಹಾಳು ಮಾಡುವ ಅಸಹ್ಯವಾದವುಗಳನ್ನು ಪ್ರತಿಷ್ಠಿಸುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ