ನ್ಯಾಯಸ್ಥಾಪಕರು 18:19

ಅವರು ಅವನಿಗೆನೀನು ಸುಮ್ಮನೆ ಇರು; ನಿನ್ನ ಬಾಯಿಯ ಮೇಲೆ ನಿನ್ನ ಕೈಹಾಕಿಕೊಂಡು ನಮ್ಮ ಸಂಗಡ ಬಂದು ನಮಗೆ ತಂದೆಯಾಗಿಯೂ ಯಾಜಕನಾಗಿಯೂ ಇರು. ನೀನು ಒಬ್ಬನ ಮನೆಗೆ ಯಾಜಕನಾಗಿರುವದು ಒಳ್ಳೇದೋ ಅಥವಾ ಇಸ್ರಾಯೇಲಿನಲ್ಲಿ ಒಂದು ಗೋತ್ರಕ್ಕೂ ಒಂದು ಕುಟುಂಬಕ್ಕೂ ಯಾಜಕನಾಗಿರುವದು ಒಳ್ಳೇದೋ ಅಂದರು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 18

17ಆದರೆ ದೇಶವನ್ನು ಪಾಳತಿ ನೋಡಿ ಬಂದ ಆ ಐದು ಮಂದಿ ಹೋಗಿ ಒಳಗೆ ಹೊಕ್ಕು ಕೆತ್ತಿದ ವಿಗ್ರಹವನ್ನೂ ಏಫೋದನ್ನೂ ಪ್ರತಿಮೆ ಗಳನ್ನೂ ಎರಕದ ವಿಗ್ರಹವನ್ನೂ ತಕ್ಕೊಂಡರು. ಆಗ ಯಾಜಕನೂ ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ಆರುನೂರು ಜನರೂ ಪ್ರವೇಶ ದ್ವಾರದಲ್ಲಿ ನಿಂತಿದ್ದರು.

18ಅವರು ವಿಾಕನ ಮನಗೆ ಬಂದು ಏಫೋದನ್ನೂ ಪ್ರತಿಮೆಗಳನ್ನೂ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹ ವನ್ನೂ ತಕ್ಕೊಂಡಾಗ ಯಾಜಕನು ಅವರಿಗೆ--ನೀವು ಏನು ಮಾಡುತ್ತೀರಿ ಅಂದನು.

19ಅವರು ಅವನಿಗೆನೀನು ಸುಮ್ಮನೆ ಇರು; ನಿನ್ನ ಬಾಯಿಯ ಮೇಲೆ ನಿನ್ನ ಕೈಹಾಕಿಕೊಂಡು ನಮ್ಮ ಸಂಗಡ ಬಂದು ನಮಗೆ ತಂದೆಯಾಗಿಯೂ ಯಾಜಕನಾಗಿಯೂ ಇರು. ನೀನು ಒಬ್ಬನ ಮನೆಗೆ ಯಾಜಕನಾಗಿರುವದು ಒಳ್ಳೇದೋ ಅಥವಾ ಇಸ್ರಾಯೇಲಿನಲ್ಲಿ ಒಂದು ಗೋತ್ರಕ್ಕೂ ಒಂದು ಕುಟುಂಬಕ್ಕೂ ಯಾಜಕನಾಗಿರುವದು ಒಳ್ಳೇದೋ ಅಂದರು.

20ಆಗ ಯಾಜಕನ ಹೃದಯವು ಸಂತೋಷಪಟ್ಟದ್ದರಿಂದ ಅವನು ಏಫೋದನ್ನೂ ಪ್ರತಿ ಮೆಗಳನ್ನೂ ಕೆತ್ತಿದ ವಿಗ್ರಹವನ್ನೂ ತಕ್ಕೊಂಡು ಜನರ ಮಧ್ಯದಲ್ಲಿ ಹೋದನು.

21ಅವರು ತಿರುಗಿಕೊಂಡು ಹೊರಟು ಚಿಕ್ಕವರನ್ನೂ ಸಾಮಾನುಗಳನ್ನೂ ಪಶು ಗಳನ್ನೂ ತಮಗೆ ಮುಂದಾಗಿ ಕಳುಹಿಸಿದರು.

ನ್ಯಾಯಸ್ಥಾಪಕರು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी