೨ ಅರಸುಗಳು 18:20

ಯುದ್ಧ ಕ್ಕಾಗಿ ಯೋಚನೆಯೂ ಪರಾಕ್ರಮವೂ ಉಂಟೆಂದು ನೀನು ಹೇಳುತ್ತೀ. ಆದರೆ ಅವು ವ್ಯರ್ಥವಾದ ಮಾತು ಗಳು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 18

18ಆದರೆ ಮನೆವಾರ್ತೆಯವನಾದ ಹಿಲ್ಕೀಯನ ಮಗನಾದ ಎಲ್ಯಾ ಕೀಮನೂ ಲೇಖಕನಾದ ಶೆಬ್ನನೂ ಸಂಪ್ರತಿಯವನಾದ ಆಸಾಫನ ಮಗನಾದ ಯೋವನೂ ಅವರ ಬಳಿಗೆ ಬಂದರು.

19ಆಗ ರಬ್ಷಾಕೆಯು ಅವರಿಗೆ--ನೀವು ಹಿಜ್ಕೀಯನಿಗೆ ಹೇಳಬೇಕಾದದ್ದೇನಂದರೆ, ಮಹಾ ಅರಸನಾದ ಅಶ್ಶೂರಿನ ಅರಸನು ಹೇಳುವದೇನಂದರೆ, ಭರವಸವಾಗಿರುವ ಈ ನಂಬಿಕೆಯೇನು?

20ಯುದ್ಧ ಕ್ಕಾಗಿ ಯೋಚನೆಯೂ ಪರಾಕ್ರಮವೂ ಉಂಟೆಂದು ನೀನು ಹೇಳುತ್ತೀ. ಆದರೆ ಅವು ವ್ಯರ್ಥವಾದ ಮಾತು ಗಳು.

21ನೀನು ನನಗೆ ವಿರೋಧವಾಗಿ ತಿರುಗಿ ಬೀಳು ವದಕ್ಕೆ ಯಾರಲ್ಲಿ ಭರವಸ ಇಟ್ಟಿದ್ದೀ? ಇಗೋ, ನೀನು ಮುರಿದ ಬೆತ್ತದ ಕೋಲಾದ ಐಗುಪ್ತದ ಮೇಲೆ ಭರ ವಸವಾಗಿದ್ದೀ. ಅದರ ಮೇಲೆ ಮನುಷ್ಯನು ಊರಿ ಕೊಂಡರೆ ಅದು ಅವನ ಕೈಯಲ್ಲಿ ಹೊಕ್ಕು ಚುಚ್ಚುವದು. ಐಗುಪ್ತದ ಅರಸನಾದ ಫರೋಹನು ತನ್ನಲ್ಲಿ ಭರವಸ ವಾಗಿರುವ ಎಲ್ಲರಿಗೂ ಹೀಗೆಯೇ ಇದ್ದಾನೆ.

22ಆದರೆ ನೀವು ನನಗೆ--ನಮ್ಮ ದೇವರಾದ ಕರ್ತನಲ್ಲಿ ಭರವಸ ವುಳ್ಳವರಾಗಿದ್ದೇವೆಂದು ಹೇಳಿದರೆ ಹಿಜ್ಕೀಯನು ಯಾವನ ಉನ್ನತ ಸ್ಥಳಗಳನ್ನೂ ಬಲಿಪೀಠಗಳನ್ನೂ ತೆಗೆದುಹಾಕಿ--ಯೆಹೂದದವರಿಗೂ ಯೆರೂಸಲೇಮಿ ನವರಿಗೂ ನೀವು ಯೆರೂಸಲೇಮಿನಲ್ಲಿ ಈ ಬಲಿಪೀಠದ ಮುಂದೆ ಅಡ್ಡಬೀಳಬೇಕೆಂದು ಹೇಳಿದವನು ಅವನೇ ಅಲ್ಲವೋ?

೨ ಅರಸುಗಳು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी