ಅನ್ಯರು ನನಗೆ ವಿರೋಧವಾಗಿ ಎದ್ದಿದ್ದಾರೆ; ಬಲಾ ತ್ಕಾರಿಗಳು ನನ್ನ ಪ್ರಾಣವನ್ನು ಹುಡುಕುತ್ತಾರೆ; ಅವರು ದೇವರನ್ನು ತಮ್ಮ ಮುಂದೆ ಇಟ್ಟುಕೊಳ್ಳಲಿಲ್ಲ. ಸೆಲಾ.
1ಓ ದೇವರೇ, ನಿನ್ನ ಹೆಸರಿನಿಂದ ನನ್ನನ್ನು ರಕ್ಷಿಸಿ ನಿನ್ನ ಬಲದಿಂದ ನನಗೆ ನ್ಯಾಯ ತೀರಿಸು.
2ಓ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಬಾಯಿಯ ಮಾತುಗಳಿಗೆ ಕಿವಿಗೊಡು.
3ಅನ್ಯರು ನನಗೆ ವಿರೋಧವಾಗಿ ಎದ್ದಿದ್ದಾರೆ; ಬಲಾ ತ್ಕಾರಿಗಳು ನನ್ನ ಪ್ರಾಣವನ್ನು ಹುಡುಕುತ್ತಾರೆ; ಅವರು ದೇವರನ್ನು ತಮ್ಮ ಮುಂದೆ ಇಟ್ಟುಕೊಳ್ಳಲಿಲ್ಲ. ಸೆಲಾ.
4ಇಗೋ, ದೇವರು ನನ್ನ ಸಹಾಯಕನು; ಕರ್ತನು ನನ್ನ ಪ್ರಾಣವನ್ನು ಉದ್ಧಾರ ಮಾಡುವವರ ಸಂಗಡ ಇದ್ದಾನೆ.
5ನನ್ನ ವಿರೋಧಿಗಳಿಗೆ ಆತನು ಕೇಡನ್ನು ಬದಲು ಕೊಡುವನು; ನಿನ್ನ ಸತ್ಯದಿಂದ ಅವರನ್ನು ಸಂಹರಿಸು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ