ಯಾಜಕಕಾಂಡ 19:4

ನೀವು ವಿಗ್ರಹ ಗಳ ಕಡೆಗೆ ತಿರುಗಿಕೊಳ್ಳಬೇಡಿರಿ ನಿಮಗೋಸ್ಕರವಾಗಿ ಎರಕದ ದೇವರುಗಳನ್ನು ಮಾಡಿಕೊಳ್ಳಬೇಡಿರಿ; ನಿಮ್ಮ ದೇವರಾಗಿರುವ ಕರ್ತನು ನಾನೇ.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 19

2ಇಸ್ರಾಯೇಲ್‌ ಮಕ್ಕಳ ಸಭೆಯ ವರೆಲ್ಲರ ಸಂಗಡ ಮಾತನಾಡಿ ಅವರಿಗೆ ಹೀಗೆ ಹೇಳ ಬೇಕು--ನೀವು ಪರಿಶುದ್ಧರಾಗಿರಬೇಕು; ನಿಮ್ಮ ದೇವರಾ ಗಿರುವ ಕರ್ತನಾದ ನಾನು ಪರಿಶುದ್ಧನಾಗಿದ್ದೇನೆ.

3ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತಾಯಿಗೂ ತಂದೆಗೂ ಭಯಪಟ್ಟು ನನ್ನ ಸಬ್ಬತ್ತುಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.

4ನೀವು ವಿಗ್ರಹ ಗಳ ಕಡೆಗೆ ತಿರುಗಿಕೊಳ್ಳಬೇಡಿರಿ ನಿಮಗೋಸ್ಕರವಾಗಿ ಎರಕದ ದೇವರುಗಳನ್ನು ಮಾಡಿಕೊಳ್ಳಬೇಡಿರಿ; ನಿಮ್ಮ ದೇವರಾಗಿರುವ ಕರ್ತನು ನಾನೇ.

5ನೀವು ನಿಮ್ಮ ದೇವರಿಗೆ ಸಮಾಧಾನದ ಬಲಿಗಳ ಯಜ್ಞವನ್ನು ಸಮರ್ಪಿಸುವದಾದರೆ ನೀವು ಅದನ್ನು ಸ್ವಇಚ್ಛೆಯಿಂದ ಅರ್ಪಿಸಬೇಕು.

6ಅದನ್ನು ನೀವು ಸಮರ್ಪಿಸಿದ ದಿನ ದಲ್ಲಿಯೂ ಮಾರನೆಯ ದಿನದಲ್ಲಿಯೂ ತಿನ್ನಬೇಕು; ಆದರೆ ಅದು ಮೂರನೆಯ ದಿನದ ವರೆಗೆ ಉಳಿದರೆ ಅದನ್ನು ಬೆಂಕಿಯಲ್ಲಿ ಸುಡಬೇಕು.

ಯಾಜಕಕಾಂಡ 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी