೧ ಸಮುವೇಲನು 25:37

ಉದಯದಲ್ಲಿ ನಾಬಾಲನಿಗೆ ದ್ರಾಕ್ಷಾರಸದ ಅಮಲು ಇಳಿದಾಗ ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು ಏನಾಯಿತಂದರೆ, ಅವನ ಹೃದಯವು ಅವನಲ್ಲಿ ಸತ್ತು ಅವನು ಕಲ್ಲಿನ ಹಾಗಾದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 25

35ಅವಳು ತನಗೆ ತಂದ ದ್ದನ್ನು ದಾವೀದನು ಅವಳ ಕೈಯಿಂದ ತಕ್ಕೊಂಡು ಅವಳಿಗೆ--ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ಇಗೋ, ನಾನು ನಿನ್ನ ಮಾತನ್ನು ಕೇಳಿ ನಿನ್ನ ವಿಜ್ಞಾಪನೆಯನ್ನು ಅಂಗೀಕರಿಸಿದೆನು ಅಂದನು.

36ತರುವಾಯ ಅಬೀಗೈಲಳು ನಾಬಾಲನ ಬಳಿಗೆ ಬಂದಾಗ ಇಗೋ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸ ಗೊಂಡಿತ್ತು. ಆದಕಾರಣ ಅವಳು ಉದಯವಾಗುವ ವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ ಹೆಚ್ಚಾದದ್ದ ನ್ನಾಗಲಿ ತಿಳಿಸಲಿಲ್ಲ.

37ಉದಯದಲ್ಲಿ ನಾಬಾಲನಿಗೆ ದ್ರಾಕ್ಷಾರಸದ ಅಮಲು ಇಳಿದಾಗ ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು ಏನಾಯಿತಂದರೆ, ಅವನ ಹೃದಯವು ಅವನಲ್ಲಿ ಸತ್ತು ಅವನು ಕಲ್ಲಿನ ಹಾಗಾದನು.

38ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ ಏನಾಯಿತಂದರೆ, ಕರ್ತನು ನಾಬಾಲನನ್ನು ಹೊಡೆದದ್ದರಿಂದ ಅವನು ಸತ್ತನು.

39ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ ತನ್ನ ಸೇವಕ ನನ್ನು ಕೇಡುಮಾಡಗೊಡದ ಹಾಗೆ ಆಟಂಕಿಸಿದ ಕರ್ತನು ಸ್ತುತಿ ಹೊಂದಲಿ; ಯಾಕಂದರೆ ಕರ್ತನು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದನು ಅಂದನು. ದಾವೀದನು ಅಬೀಗೈಲ ಳನ್ನು ತನಗೆ ಹೆಂಡತಿಯಾಗಿ ತಕ್ಕೊಳ್ಳುವದಕ್ಕಾಗಿ ಅವಳ ಸಂಗಡ ಮಾತನಾಡ ಕಳುಹಿಸಿದನು.

೧ ಸಮುವೇಲನು 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी