ಅಪೊಸ್ತಲರ ಕೃತ್ಯಗಳು 27:18

ಬಿರುಗಾಳಿಯು ನಮ್ಮನ್ನು ಬಹಳವಾಗಿ ಹೊಯಿದಾಡಿಸಿದ್ದರಿಂದ ಮರುದಿನ ಅವರು ಹಡಗನ್ನು ಹಗುರವಾಗಿ ಮಾಡಿ ದರು;

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 27

16ನಾವು ಕ್ಲೌಡವೆಂಬ ಒಂದು ದ್ವೀಪದ ಮರೆಯಲ್ಲಿ ಹೋಗುತ್ತಿ ದ್ದದರಿಂದ ದೋಣಿಯನ್ನು ಭದ್ರಮಾಡಿಕೊಳ್ಳುವದು ನಮಗೆ ಬಹಳ ಪ್ರಯಾಸವಾಗಿತ್ತು.

17ಅದನ್ನು ಮೇಲಕ್ಕೆ ಎತ್ತಿ ಸಾಧನಗಳಿಂದ ಹಡಗಿನ ಕೆಳಭಾಗವನ್ನು ಬಿಗಿಯಾಗಿ ಕಟ್ಟಿದರು. ಆಮೇಲೆ ಕಳ್ಳುಸುಬಿಗೆ ನಾವು ಸಿಕ್ಕಿಕೊಂಡೇವೆಂದು ಭಯಪಟ್ಟು ಹಾಯಿಯನ್ನು ಸಡಿಲು ಮಾಡಿ ನೂಕಿಸಿಕೊಂಡು ಹೋದೆವು.

18ಬಿರುಗಾಳಿಯು ನಮ್ಮನ್ನು ಬಹಳವಾಗಿ ಹೊಯಿದಾಡಿಸಿದ್ದರಿಂದ ಮರುದಿನ ಅವರು ಹಡಗನ್ನು ಹಗುರವಾಗಿ ಮಾಡಿ ದರು;

19ಮೂರನೆಯ ದಿನ ನಮ್ಮ ಕೈಗಳಿಂದಲೇ ಹಡಗಿನ ಸಾಮಾನುಗಳನ್ನು ಎತ್ತಿ ಹೊರಗೆ ಹಾಕಿದೆವು.

20ಅನೇಕ ದಿವಸಗಳವರೆಗೆ ಸೂರ್ಯನಾಗಲಿ ನಕ್ಷತ್ರ ಗಳಾಗಲಿ ಕಾಣಿಸದೆ ದೊಡ್ಡ ಬಿರುಗಾಳಿಯು ನಮ್ಮ ಮೇಲೆ ಹೊಡೆದದ್ದರಿಂದ ನಾವು ಪಾರಾದೇವೆಂಬ ಎಲ್ಲಾ ನಿರೀಕ್ಷೆಯು ತಪ್ಪಿಹೋಯಿತು.

ಅಪೊಸ್ತಲರ ಕೃತ್ಯಗಳು 27 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी