ಅರಸನೂ ಅವನ ಹಿಂದೆ ಎಲ್ಲಾ ಜನರೂ ಹೊರಟು ಹೋಗಿ ದೂರವಾದ ಸ್ಥಳದಲ್ಲಿ ನಿಂತರು.
15ಆಗ ಅರಸನ ಸೇವಕರು ಅರಸನಿಗೆಇಗೋ, ಅರಸನಾದ ನಮ್ಮ ಒಡೆಯನು ನಮಗೆ ಏನೇನು ಆಜ್ಞಾಪಿಸುವನೋ ಅದನ್ನು ಮಾಡುವದಕ್ಕೆ ನಿನ್ನ ಸೇವಕರು ಸಿದ್ಧರಾಗಿದ್ದೇವೆ ಅಂದರು.
16ಅರಸನು ಮನೆಗೆ ಕಾವಲಿರುವಂತೆ ಉಪಪತ್ನಿಗಳಾದ ಹತ್ತು ಮಂದಿ ಸ್ತ್ರೀಯರನ್ನು ಬಿಟ್ಟು ಅವನೂ ಅವನ ಮನೆ ಯವರೆಲ್ಲರೂ ಅವನ ಹಿಂದೆ ಹೊರಟು ಹೋದರು.
17ಅರಸನೂ ಅವನ ಹಿಂದೆ ಎಲ್ಲಾ ಜನರೂ ಹೊರಟು ಹೋಗಿ ದೂರವಾದ ಸ್ಥಳದಲ್ಲಿ ನಿಂತರು.
18ಅವನ ಎಲ್ಲಾ ಸೇವಕರೂ ಕೆರೇತ್ಯರೂ ಪೆಲೇತ್ಯರೂ ಅವನ ಹಿಂದೆ ಗತ್ ಊರಿನಿಂದ ಅವನ ಸಂಗಡ ಬಂದ ಗಿತ್ತಿಯರಾದ ಆರುನೂರು ಮಂದಿಯೂ ಅರಸನ ಮುಂದೆ ನಡೆದರು.
19ಆಗ ಅರಸನು ಗಿತ್ತೀಯನಾದ ಇತ್ತೈಯನ್ನು ನೋಡಿ--ನೀನು ನಮ್ಮ ಸಂಗಡ ಬರುವದು ಯಾಕೆ? ನಿನ್ನ ಸ್ಥಳಕ್ಕೆ ಹಿಂದಿರುಗಿ ಹೋಗಿ ಅರಸನ ಸಂಗಡ ಇರು. ಯಾಕಂದರೆ ನೀನು ಸೆರೆಹಿಡಿಯಲ್ಪಟ್ಟವನಾದ ಅನ್ಯದೇಶದವನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ