ಲೂಕನು 13:15

ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ ಅವನಿಗೆ--ಕಪಟಿಯೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ತಿನಲ್ಲಿ ತನ್ನ ಎತ್ತನ್ನಾಗಲಿ ಇಲ್ಲವೆ ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವದಕ್ಕಾಗಿ ಹೋಗುವನಲ್ಲವೇ?

ಸಂದರ್ಭದೊಂದಿಗೆ ಓದಿ · ಲೂಕನು 13

13ಆತನು ಆಕೆಯ ಮೇಲೆ ತನ್ನ ಕೈಗಳನ್ನು ಇಟ್ಟನು; ಕೂಡಲೆ ಆಕೆಯು ನೆಟ್ಟಗಾಗಿ ದೇವರನ್ನು ಮಹಿಮೆಪಡಿಸಿದಳು.

14ಯೇಸು ಸಬ್ಬತ್‌ ದಿನದಲ್ಲಿ ಸ್ವಸ್ಥಪಡಿಸಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ--ಆರು ದಿವಸಗಳಲ್ಲಿ ಮನು ಷ್ಯರು ಕೆಲಸ ಮಾಡತಕ್ಕದ್ದು. ಆದದರಿಂದ ಅವುಗಳಲ್ಲಿ ಅವರು ಬಂದು ಸ್ವಸ್ಥತೆ ಹೊಂದಲಿ; ಸಬ್ಬತ್‌ ದಿನದಲ್ಲಿ ಬೇಡ ಅಂದನು.

15ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ ಅವನಿಗೆ--ಕಪಟಿಯೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ತಿನಲ್ಲಿ ತನ್ನ ಎತ್ತನ್ನಾಗಲಿ ಇಲ್ಲವೆ ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವದಕ್ಕಾಗಿ ಹೋಗುವನಲ್ಲವೇ?

16ಹಾಗಾದರೆ ಇಗೋ, ಅಬ್ರ ಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರುಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನ ದಿಂದ ಸಬ್ಬತ್‌ ದಿನದಲ್ಲಿ ಬಿಡಿಸಬಾರದೋ ಅಂದನು.

17ಆತನು ಇವುಗಳನ್ನು ಹೇಳುತ್ತಿರುವಾಗ ಆತನ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು; ಆದರೆ ಜನರೆಲ್ಲಾ ಆತನಿಂದ ನಡೆದ ಎಲ್ಲಾ ಮಹತ್ತಾದ ಕಾರ್ಯಗಳಿಗಾಗಿ ಸಂತೋಷಪಟ್ಟರು.

ಲೂಕನು 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी