ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು; ಹುಡುಕುವವನು ಕಂಡುಕೊಳ್ಳುವನು; ತಟ್ಟುವವನಿಗೆ ತೆರೆಯಲ್ಪಡುವದು.
8ಆದರೆ ನಾನು ನಿಮಗೆ ಹೇಳುವದೇನಂದರೆ--ಅವನು ತನ್ನ ಸ್ನೇಹಿತನಾಗಿರುವದರಿಂದ ಎದ್ದು ಅವನಿಗೆ ಕೊಡದೆ ಹೋದರೂ ಅವನು ಮೇಲಿಂದ ಮೇಲೆ ಪೀಡಿಸಿ ಬೇಡುವದರಿಂದ ಎದ್ದು ಅವನಿಗೆ ಬೇಕಾದಷ್ಟು ಕೊಡುವನು.
9ನಾನು ನಿಮಗೆ ಹೇಳುವದೇನಂ ದರೆ--ಬೇಡಿಕೊಳ್ಳಿರಿ, ನಿಮಗೆ ಕೊಡಲ್ಪಡುವದು; ಹುಡುಕಿರಿ, ನೀವು ಕಂಡುಕೊಳ್ಳುವಿರಿ; ತಟ್ಟಿರಿ, ನಿಮಗೆ ತೆರೆಯಲ್ಪಡುವದು.
10ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು; ಹುಡುಕುವವನು ಕಂಡುಕೊಳ್ಳುವನು; ತಟ್ಟುವವನಿಗೆ ತೆರೆಯಲ್ಪಡುವದು.
11ನಿಮ್ಮಲ್ಲಿ ತಂದೆ ಯಾಗಿರುವ ಯಾವನಾದರೂ ತನ್ನ ಮಗನು ರೊಟ್ಟಿ ಕೇಳಿದರೆ ಅವನಿಗೆ ಕಲ್ಲನ್ನು ಕೊಡುವನೇ? ಇಲ್ಲವೆ ವಿಾನನ್ನು ಕೇಳಿದರೆ ವಿಾನಿಗೆ ಬದಲಾಗಿ ಅವನಿಗೆ ಹಾವನ್ನು ಕೊಡುವನೇ?
12ಇಲ್ಲವೆ ಅವನು ಮೊಟ್ಟೆ ಯನ್ನು ಕೇಳಿದರೆ ಅವನಿಗೆ ಚೇಳನ್ನು ಕೊಡುವನೇ?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ