ದಾನಿಯೇಲನು 4:25

ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿ ಬಿಡುವರು; ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು; ನಿನಗೆ ಎತ್ತುಗಳ ಸಂಗಡ ಹುಲ್ಲನ್ನು ಮೇಯಿಸುವರು. ಆಕಾಶದ ಮಂಜಿನಿಂದ ನಿನ್ನನ್ನು ತೇವ ಮಾಡುವರು. ಮಹೋನ್ನತನು ಮನುಷ್ಯರ ರಾಜ್ಯವನ್ನು ಆಳುವನೆಂದೂ ತನ್ನ ಮನಸ್ಸಿಗೆ ಸರಿಬಂದ ವರಿಗೆ ಅದನ್ನು ಕೊಡುತ್ತಾನೆಂದೂ ನೀನು ತಿಳಿಯುವ ವರೆಗೂ ಆ ಏಳು ಕಾಲಗಳು ಕಳೆದು ಹೋಗುವವು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 4

23ಆಗ ಪಾಲಕನು ಮತ್ತು ಪರಿಶುದ್ಧನಾದ ಒಬ್ಬನು ಪರಲೋಕದಿಂದ ಇಳಿದು ಬಂದು--ಮರವನ್ನು ಕಡಿದು ನಾಶಮಾಡಿರಿ; ಆದರೆ ಅದರ ಬೇರಿನ ಮೋಟನ್ನು ಕಬ್ಬಿಣ ಮತ್ತು ಕಂಚುಗಳ ಕಟ್ಟುಳ್ಳದ್ದಾಗಿ ಭೂಮಿಯಲ್ಲಿಯೂ ಬಯಲಿನ ಎಳೇ ಹುಲ್ಲಿನಲ್ಲಿಯೂ ಬಿಡಿರಿ. ಅದು ಆಕಾಶದ ಮಂಜಿನಿಂದ ತೇವವಾಗಲಿ; ಏಳು ಕಾಲಗಳು ಕಳೆಯುವ ತನಕ ಅದರ ಪಾಲು ಕಾಡು ಮೃಗಗಳ ಸಹವಾಸದ ಗತಿಯಂತೆ ಬರಲಿ ಎಂದು ಸಾರುವದನ್ನು ಅರಸನಾದ ನೀನು ನೋಡಿದೆಯಲ್ಲಾ.

24ಓ ಅರಸನೇ, ಇದರ ಅರ್ಥವು ಏನಂದರೆ, ನನ್ನ ಒಡೆಯನಾದ ಅರಸನ ಮೇಲೆ ಬಂದಂಥ ಮಹೋನ್ನತನ ನಿರ್ಣಯವು ಹೀಗಿದೆ.

25ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿ ಬಿಡುವರು; ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು; ನಿನಗೆ ಎತ್ತುಗಳ ಸಂಗಡ ಹುಲ್ಲನ್ನು ಮೇಯಿಸುವರು. ಆಕಾಶದ ಮಂಜಿನಿಂದ ನಿನ್ನನ್ನು ತೇವ ಮಾಡುವರು. ಮಹೋನ್ನತನು ಮನುಷ್ಯರ ರಾಜ್ಯವನ್ನು ಆಳುವನೆಂದೂ ತನ್ನ ಮನಸ್ಸಿಗೆ ಸರಿಬಂದ ವರಿಗೆ ಅದನ್ನು ಕೊಡುತ್ತಾನೆಂದೂ ನೀನು ತಿಳಿಯುವ ವರೆಗೂ ಆ ಏಳು ಕಾಲಗಳು ಕಳೆದು ಹೋಗುವವು.

26ಆ ಮರದ ಬೇರಿನ ಮೋಟನ್ನು ಉಳಿಸಬೇಕೆಂದು ಅವರು ಆಜ್ಞೆ ಮಾಡಿದ್ದರಲ್ಲಿ ಅಂದರೆ ಪರಲೋಕವು ಆಳುತ್ತದೆಂದು ನೀನು ತಿಳಿದುಕೊಂಡ ಮೇಲೆ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವದು.

27ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.

ದಾನಿಯೇಲನು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी