೨ ಅರಸುಗಳು 18:29

ಅರಸನು ಹೇಳುವದೇನಂದರೆ--ಹಿಜ್ಕೀಯನು ನಿಮ್ಮನ್ನು ಮೋಸ ಗೊಳಿಸದೆ ಇರಲಿ; ಅವನು ನಿಮ್ಮನ್ನು ಅವನ ಕೈಯೊಳ ಗಿಂದ ತಪ್ಪಿಸಲಾರನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 18

27ಆದರೆ ರಬ್ಷಾಕೆಯು ಅವರಿಗೆ--ನನ್ನ ಯಜಮಾನನು ನಿನ್ನ ಯಜಮಾನನಿಗೂ ನಿನಗೂ ಈ ಮಾತುಗಳನ್ನು ಹೇಳಲು ನನ್ನನ್ನು ಕಳುಹಿಸಿದನೋ? ಗೋಡೆಯ ಮೇಲೆ ಕುಳಿತ ಜನರು ತಮ್ಮ ಮಲವನ್ನು ತಿಂದು ತಮ್ಮ ಮೂತ್ರವನ್ನು ನಿಮ್ಮ ಸಂಗಡ ಕುಡಿಯುವ ಹಾಗೆ ಅವರ ಬಳಿಗೆ ನನ್ನನ್ನು ಕಳುಹಿಸಲಿಲ್ಲವೋ ಎಂದು ಹೇಳಿದನು.

28ಆಗ ರಬ್ಷಾಕೆಯು ನಿಂತು ಕೊಂಡು ಯೆಹೂದ್ಯರ ಭಾಷೆಯಲ್ಲಿ ಮಹಾ ಶಬ್ದವಾಗಿ ಕೂಗಿ ಹೇಳಿದ್ದೇನಂದರೆ -- ಮಹಾ ಅರಸನಾದ ಅಶ್ಶೂರಿನ ಅರಸನ ಮಾತನ್ನು ಕೇಳಿರಿ.

29ಅರಸನು ಹೇಳುವದೇನಂದರೆ--ಹಿಜ್ಕೀಯನು ನಿಮ್ಮನ್ನು ಮೋಸ ಗೊಳಿಸದೆ ಇರಲಿ; ಅವನು ನಿಮ್ಮನ್ನು ಅವನ ಕೈಯೊಳ ಗಿಂದ ತಪ್ಪಿಸಲಾರನು.

30ಇದಲ್ಲದೆ ಕರ್ತನು ನಮ್ಮನ್ನು ತಪ್ಪಿಸೇ ತಪ್ಪಿಸುವನೆಂದೂ ಈ ಪಟ್ಟಣವು ಅಶ್ಶೂರಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದಿಲ್ಲವೆಂದೂ ಹಿಜ್ಕೀ ಯನು ನಿಮಗೆ ಕರ್ತನಲ್ಲಿ ಭರವಸೆ ಹುಟ್ಟಿಸದೆ ಇರಲಿ.

31ಹಿಜ್ಕೀಯನ ಮಾತು ಕೇಳಬೇಡಿರಿ. ಅಶ್ಶೂರಿನ ಅರ ಸನು ಹೇಳುವದೇನಂದರೆ--ನೀವು ಸಾಯದೆ ಬದು ಕುವ ಹಾಗೆ ಕಾಣಿಕೆಯಿಂದ ನನ್ನ ಸಂಗಡ ಒಡಂಬಡಿಕೆ ಮಾಡಿ ನನ್ನ ಬಳಿಗೆ ಹೊರಟು ಬನ್ನಿರಿ.

೨ ಅರಸುಗಳು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी