ಆದರೆ ಅವನು ಅವರು ಆಡಿದ್ದನ್ನು ತಿಳಿದುಕೊಳ್ಳುತ್ತಾನೆಂದು ಅವರಿಗೆ ಗೊತ್ತಾಗಲಿಲ್ಲ; ದ್ವಿಭಾಷೆಯಿಂದ ಅವರ ಸಂಗಡ ಮಾತನಾಡಿದನು.
21ಆಗ ಅವರು--ನಿಶ್ಚಯವಾಗಿ ನಮ್ಮ ಸಹೋದರನ ಅಪರಾಧವು ನಮ್ಮ ಮೇಲೆ ಇದೆ. ಅವನು ನಮ್ಮನ್ನು ಬೇಡಿಕೊಂಡಾಗ ಅವನ ಪ್ರಾಣ ಸಂಕಟವನ್ನು ನೋಡಿಯೂ ಕೇಳದೆ ಹೋದೆವು. ಆದಕಾರಣ ಈ ಸಂಕಟವು ನಮ್ಮ ಮೇಲೆ ಬಂದಿತು ಎಂದು ಅಂದುಕೊಂಡರು.
22ಆಗ ರೂಬೇನನು ಅವರಿಗೆ ಪ್ರತ್ಯುತ್ತರವಾಗಿ--ಆ ಹುಡುಗನಿಗೆ ಏನೂ ಕೇಡುಮಾಡಬೇಡಿರಿ ಎಂದು ನಾನು ನಿಮಗೆ ಹೇಳಿ ದಾಗ್ಯೂ ನೀವು ಕೇಳಲಿಲ್ಲ. ಆದದರಿಂದ ಈಗ ಇಗೋ, ಅವನ ರಕ್ತವು ನಮ್ಮ ಮೇಲೆ ಇದೆ ಅಂದನು.
23ಆದರೆ ಅವನು ಅವರು ಆಡಿದ್ದನ್ನು ತಿಳಿದುಕೊಳ್ಳುತ್ತಾನೆಂದು ಅವರಿಗೆ ಗೊತ್ತಾಗಲಿಲ್ಲ; ದ್ವಿಭಾಷೆಯಿಂದ ಅವರ ಸಂಗಡ ಮಾತನಾಡಿದನು.
24ಆಗ ಅವನು ಅವರ ಕಡೆಯಿಂದ ಹೊರಟುಹೋಗಿ ಅತ್ತು ಮತ್ತೆ ಅವರ ಬಳಿಗೆ ಬಂದು ಅವರ ಸಂಗಡ ಮಾತನಾಡಿ ಅವರಲ್ಲಿ ಸಿಮೆಯೋನನನ್ನು ಹಿಡಿಸಿ ಅವರ ಕಣ್ಣೆದುರಿನಲ್ಲಿ ಬಂಧಿಸಿ ಸೆರೆಯಲ್ಲಿ ಹಾಕಿಸಿದನು..
25ತರುವಾಯ ಯೋಸೇಫನು ಧಾನ್ಯವನ್ನು ತುಂಬಿಸ ಬೇಕೆಂದೂ ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ತಿರಿಗಿ ಇಡಬೇಕೆಂದೂ ಹಾದಿಗೋಸ್ಕರ ಅವರಿಗೆ ಆಹಾರ ಸರಬರಾಜು ಮಾಡಬೇಕೆಂದೂ ಆಜ್ಞಾಪಿಸಿದನು. ಹೀಗೆಯೇ ಅವನು ಅವರಿಗೆ ಮಾಡಿ ದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ