ಯೆರೆಮಿಯ 16:3

ಈ ಸ್ಥಳದಲ್ಲಿ ಹುಟ್ಟಿರುವ ಕುಮಾರ ಕುಮಾರ್ತೆ ರಯರನ್ನು ಕುರಿತಾಗಿಯೂ ಅವರನ್ನು ಹೆತ್ತ ತಾಯಿಗಳನ್ನು ಈ ದೇಶದಲ್ಲಿ ಅವರನ್ನು ಪಡೆದ ತಂದೆಗಳನ್ನು ಕುರಿ ತಾಗಿಯೂ ಕರ್ತನು ಹೀಗೆ ಹೇಳುತ್ತಾನೆ--

ಸಂದರ್ಭದೊಂದಿಗೆ ಓದಿ · ಯೆರೆಮಿಯ 16

1ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--

2ಈ ಸ್ಥಳದಲ್ಲಿ ನೀನು ಹೆಂಡತಿಯನ್ನು ತಕ್ಕೊಳ್ಳಬೇಡ; ನಿನಗೆ ಕುಮಾರರಾಗಲಿ ಕುಮಾರ್ತೆಯರಾಗಲಿ ಈ ಸ್ಥಳದಲ್ಲಿ ಇರಬಾರದು;

3ಈ ಸ್ಥಳದಲ್ಲಿ ಹುಟ್ಟಿರುವ ಕುಮಾರ ಕುಮಾರ್ತೆ ರಯರನ್ನು ಕುರಿತಾಗಿಯೂ ಅವರನ್ನು ಹೆತ್ತ ತಾಯಿಗಳನ್ನು ಈ ದೇಶದಲ್ಲಿ ಅವರನ್ನು ಪಡೆದ ತಂದೆಗಳನ್ನು ಕುರಿ ತಾಗಿಯೂ ಕರ್ತನು ಹೀಗೆ ಹೇಳುತ್ತಾನೆ--

4ಅವರು ಬಹು ಕ್ರೂರವಾದ ಮರಣಗಳಿಂದ ಸಾಯುವರು; ಅವರಿಗೋಸ್ಕರ ಗೋಳಾಟ ಆಗುವದಿಲ್ಲ; ಅವರು ಹೂಣಿಡಲ್ಪಡುವದಿಲ್ಲ; ಭೂಮಿಯ ಮೇಲೆ ಅವರು ಗೊಬ್ಬರವಾಗುವರು; ಕತ್ತಿಯಿಂದಲೂ ಕ್ಷಾಮದಿಂದಲೂ ಸಂಹಾರವಾಗುವರು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರ ವಾಗುವವು.

5ಕರ್ತನು ಹೀಗೆ ಹೇಳುತ್ತಾನೆ--ದುಃಖದ ಮನೆ ಯಲ್ಲಿ ಪ್ರವೇಶಿಸಬೇಡ, ಅವರ ಸಂಗಡ ಗೋಳಾಡು ವದಕ್ಕೂ ದುಃಖಪಡುವದಕ್ಕೂ ಹೋಗಬೇಡ; ನಾನು ನನ್ನ ಸಮಾಧಾನವನ್ನೂ ಕೃಪೆಯನ್ನೂ ಕರುಣೆಯನ್ನೂ ಈ ಜನರಿಂದ ತೆಗೆದುಹಾಕಿದ್ದೇನೆಂದು ಕರ್ತನು ಅನ್ನುತ್ತಾನೆ.

ಯೆರೆಮಿಯ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी