ನೀನು ನನ್ನ ಸ್ವರವನ್ನು ಕೇಳಿದ್ದೀ; ನನ್ನ ಶ್ವಾಸಕ್ಕೂ ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಲಿಲ್ಲ.
54ಪ್ರವಾಹವು ನನ ತಲೆಯ ಮೇಲೆ ಹರಿಯಿತು; ಆಗ--ನಾನು ಸತ್ತೆನು ಅಂದುಕೊಂಡೆನು.
55ಓ ಕರ್ತನೇ, ನಾನು ಆಳವಾದ ಕಾರಾಗೃಹದಿಂದ ನಿನ್ನ ಹೆಸರನ್ನು ಎತ್ತಿ ಬೇಡಿಕೊಂಡೆನು.
56ನೀನು ನನ್ನ ಸ್ವರವನ್ನು ಕೇಳಿದ್ದೀ; ನನ್ನ ಶ್ವಾಸಕ್ಕೂ ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಲಿಲ್ಲ.
57ನಾನು ನಿನ್ನನ್ನು ಕರೆದ ದಿನದಲ್ಲಿ ನೀನು ಸವಿಾಪಕ್ಕೆ ಬಂದು--ಭಯಪಡ ಬೇಡ ಎಂದು ಹೇಳಿದಿ.
58ಓ ಕರ್ತನೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡಿಸಿ ನನ್ನ ಜೀವವನ್ನು ವಿಮೋಚಿಸಿದ್ದೀ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ