ಲೂಕನು 14:16

ಆಗ ಆತನು ಅವನಿಗೆ--ಒಬ್ಬಾನೊಬ್ಬ ಮನುಷ್ಯನು ಒಂದು ದೊಡ್ಡ ಔತಣಮಾಡಿಸಿ ಅನೇಕರನ್ನು ಕರೆದನು.

ಸಂದರ್ಭದೊಂದಿಗೆ ಓದಿ · ಲೂಕನು 14

14ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವದಕ್ಕೆ ಆಗದಿರುವ ದರಿಂದ ನೀನು ಧನ್ಯನಾಗುವಿ. ಯಾಕಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವದು.

15ಆಗ ಆತನ ಸಂಗಡ ಊಟಕ್ಕೆ ಕೂತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಆತನಿಗೆ--ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು ಎಂದು ಹೇಳಿದನು.

16ಆಗ ಆತನು ಅವನಿಗೆ--ಒಬ್ಬಾನೊಬ್ಬ ಮನುಷ್ಯನು ಒಂದು ದೊಡ್ಡ ಔತಣಮಾಡಿಸಿ ಅನೇಕರನ್ನು ಕರೆದನು.

17ಔತಣದ ಸಮಯವಾದಾಗ ಕರೆಯಲ್ಪಟ್ಟವರಿಗೆ ಅವನು--ಎಲ್ಲವೂ ಸಿದ್ಧವಾಗಿದೆ, ಬನ್ನಿರಿ ಎಂದು ಹೇಳುವದಕ್ಕಾಗಿ ತನ್ನ ಸೇವಕನನ್ನು ಕಳುಹಿಸಿದನು.

18ಆದರೆ ಅವರೆಲ್ಲರೂ ಒಂದೇ ಮನ ಸ್ಸಿನಿಂದ ನೆವ ಹೇಳಲಾರಂಭಿಸಿ ಮೊದಲನೆಯವನು ಅವನಿಗೆ--ನಾನು ಒಂದು ತುಂಡು ಭೂಮಿಯನ್ನು ಕೊಂಡುಕೊಂಡಿದ್ದೇನೆ, ಹೋಗಿ ಅದನ್ನು ನೋಡುವದು ಅವಶ್ಯವಾಗಿದೆ; ನನ್ನನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.

ಲೂಕನು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी