ನಿನ್ನ ಜೀವವು ನಿನ್ನ ಮುಂದೆ ತೂಗಾಡುವದು. ರಾತ್ರಿ ಹಗಲು ನಿನ್ನ ಜೀವನಕ್ಕೆ ನಿಶ್ಚಯವಿಲ್ಲದೆ ಹೆದರುವಿ.
64ಇದ ಲ್ಲದೆ ಕರ್ತನು ನಿನ್ನನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯ ವರೆಗೂ ಎಲ್ಲಾ ಜನಗಳಲ್ಲಿ ಚದರಿಸು ವನು; ಅಲ್ಲಿ ನೀನೂ ನಿನ್ನ ಪಿತೃಗಳೂ ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಸೇವಿಸುವಿ.
65ಈ ಜನಾಂಗಗಳಲ್ಲಿ ನಿನಗೆ ನೆಮ್ಮದಿ ಇರುವದಿಲ್ಲ; ನಿನ್ನ ಅಂಗಾಲಿಗೆ ವಿಶ್ರಾಂತಿ ಆಗುವದಿಲ್ಲ; ಅಲ್ಲಿ ಕರ್ತನು ನಿನಗೆ ನಡುಗುವ ಹೃದಯವನ್ನೂ ಕ್ಷೀಣಿಸುವ ಕಣ್ಣುಗಳನ್ನೂ ಕುಗ್ಗಿದ ಮನಸ್ಸನ್ನೂ ಕೊಡು ವನು.
66ನಿನ್ನ ಜೀವವು ನಿನ್ನ ಮುಂದೆ ತೂಗಾಡುವದು. ರಾತ್ರಿ ಹಗಲು ನಿನ್ನ ಜೀವನಕ್ಕೆ ನಿಶ್ಚಯವಿಲ್ಲದೆ ಹೆದರುವಿ.
67ನಿನ್ನ ಹೃದಯದಲ್ಲಿ ಆಗುವ ಹೆದರಿಕೆಯ ನಿಮಿತ್ತವೂ ನಿನ್ನ ಕಣ್ಣುಗಳು ನೋಡುವ ನೋಟದ ನಿಮಿತ್ತವೂ ಮುಂಜಾನೆಯಲ್ಲಿ--ಅಯ್ಯೋ, ಸಂಜೆ ಆಗ ಬೇಕು ಅನ್ನುವಿ. ಸಂಜೆಯಲ್ಲಿ--ಅಯ್ಯೋ, ಮುಂಜಾನೆ ಆಗಬೇಕು ಅನ್ನುವಿ.
68ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ