ಯೆರೆಮಿಯ 35:11

ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ದೇಶದಲ್ಲಿ ಬಂದಾಗ ನಾವು--ಬನ್ನಿ, ಕಸ್ದೀಯರ ದಂಡಿಗೂ ಅರಾಮಿನ ದಂಡಿಗೂ ಎಡೆಯಾಗಿ ಯೆರೂಸ ಲೇಮಿಗೆ ಹೋಗೋಣ ಅಂದೆವು. ಹೀಗೆ ಯೆರೂಸ ಲೇಮಿನಲ್ಲಿ ವಾಸಮಾಡುತ್ತೇವೆ ಅಂದರು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 35

9ವಾಸಮಾಡು ವದಕ್ಕೆ ಮನೆಗಳನ್ನು ಕಟ್ಟದ ಹಾಗೆಯೂ ನಾವು ಕೇಳಿ ದ್ದೇವೆ; ನಮಗೆ ದ್ರಾಕ್ಷೇ ತೋಟಗಳೂ ಹೊಲಗಳೂ ಬೀಜವೂ ಇಲ್ಲ.

10ಗುಡಾರಗಳಲ್ಲಿ ವಾಸಮಾಡುತ್ತೇವೆ; ನಮ್ಮ ತಂದೆಯಾದ ಯೋನಾದಾಬನು ನಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಕೇಳಿ ಮಾಡಿದ್ದೇವೆ.

11ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ದೇಶದಲ್ಲಿ ಬಂದಾಗ ನಾವು--ಬನ್ನಿ, ಕಸ್ದೀಯರ ದಂಡಿಗೂ ಅರಾಮಿನ ದಂಡಿಗೂ ಎಡೆಯಾಗಿ ಯೆರೂಸ ಲೇಮಿಗೆ ಹೋಗೋಣ ಅಂದೆವು. ಹೀಗೆ ಯೆರೂಸ ಲೇಮಿನಲ್ಲಿ ವಾಸಮಾಡುತ್ತೇವೆ ಅಂದರು.

12ಆಗ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವ ರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--

13ನೀನು ಹೋಗಿ ಯೆಹೂದದ ಮನುಷ್ಯರಿಗೂ ಯೆರೂಸಲೇ ಮಿನ ನಿವಾಸಿಗಳಿಗೂ ಹೇಳತಕ್ಕದ್ದೇನಂದರೆ--ನೀವು ನನ್ನ ವಾಕ್ಯಗಳನ್ನು ಕೇಳುವ ಹಾಗೆ ಶಿಕ್ಷಣ ತಕ್ಕೊಳ್ಳು ವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ.

ಯೆರೆಮಿಯ 35 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी