ಚಕ್ರಗಳೋ ಅವುಗಳಿಗೆ ನಾನು ಕೇಳುವ ಹಾಗೆ ಓ ಚಕ್ರಗಳೇ ಎಂದು ಕೂಗಲ್ಪಟ್ಟಿತು.
11ಅವು ಹೋಗುತ್ತಿರುವಾಗ ಅವುಗಳು ನಾಲ್ಕು ಕಡೆಗಳಲ್ಲೂ ಹೋಗುತ್ತಿದ್ದವು. ಹೋಗುವಾಗ ತಿರುಗಿ ಕೊಳ್ಳಲಿಲ್ಲ. ಆದರೆ ಅವುಗಳ ತಲೆ ಯಾವ ಸ್ಥಳವನ್ನು ನೋಡುತ್ತಿತ್ತೋ ಅಲ್ಲಿಗೆ ಅದರ ಹಿಂದೆಯೇ ಹೋದವು, ಹೋಗುವಾಗ ತಿರುಗಲಿಲ್ಲ.
12ಅವುಗಳ ಪೂರ್ತಿ ದೇಹವು, ಬೆನ್ನುಗಳು, ಕೈಗಳು, ರೆಕ್ಕೆಗಳು, ಮತ್ತು ಚಕ್ರಗಳು, ಇವುಗಳಿಗೆ ಸುತ್ತಲೂ ಕಣ್ಣುಗಳು ಇದ್ದವು. ಅಲ್ಲಿ ನಾಲ್ಕೂ ಚಕ್ರಗಳ ಮೇಲೂ ಇದ್ದವು.
13ಚಕ್ರಗಳೋ ಅವುಗಳಿಗೆ ನಾನು ಕೇಳುವ ಹಾಗೆ ಓ ಚಕ್ರಗಳೇ ಎಂದು ಕೂಗಲ್ಪಟ್ಟಿತು.
14ಒಬ್ಬೊಬ್ಬ ನಿಗೆ ನಾಲ್ಕು ಮುಖಗಳಿದ್ದವು, ಮೊದಲನೆಯ ಮುಖವು ಕೆರೂಬಿಯನ ಮುಖ, ಎರಡನೆಯ ಮುಖವು ಮನು ಷ್ಯನ ಮುಖ ಮೂರನೆಯದು ಸಿಂಹದ ಮುಖ ಮತ್ತು ನಾಲ್ಕನೆಯದು ಹದ್ದಿನ ಮುಖಗಳಾಗಿದ್ದವು.
15ಆಗ ಕೆರೂಬಿಯರು ಮೇಲಕ್ಕೆತ್ತಲ್ಪಟ್ಟರು. ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ಜೀವಿಯು ಇದೇ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ