ನಿನ್ನನ್ನು ಕಚ್ಚುವವರು ಕ್ಷಣಮಾತ್ರದಲ್ಲಿ ಏಳರೋ? ನಿನ್ನನ್ನು ಪೀಡಿಸುವವರು ಎಚ್ಚರವಾಗರೋ? ಆಗ ನೀನು ಅವರಿಗೆ ಸುಲಿಗೆ ಯಾಗುವಿ.
5ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ.
6ಇವರೆಲ್ಲರು ಅವನ ಮೇಲೆ ಸಾಮ್ಯವನ್ನೂ ಹಾಸ್ಯದ ಸಾಮತಿಯನ್ನೂ ಎತ್ತಿ--ತನಗಲ್ಲದ್ದನ್ನು ಹೆಚ್ಚಿಸಿಕೊಳ್ಳು ವವನಿಗೆ ಅಯ್ಯೋ! ಅದು ಎಷ್ಟರ ವರೆಗೆ? ತಾನಾಗಿ ತನ್ನ ಮೇಲೆ ಗಟ್ಟಿ ಮಣ್ಣನ್ನು ಹೊತ್ತುಕೊಳ್ಳುವವನಿಗೆ ಅಯ್ಯೋ ಎಂದು ಹೇಳರೋ?
7ನಿನ್ನನ್ನು ಕಚ್ಚುವವರು ಕ್ಷಣಮಾತ್ರದಲ್ಲಿ ಏಳರೋ? ನಿನ್ನನ್ನು ಪೀಡಿಸುವವರು ಎಚ್ಚರವಾಗರೋ? ಆಗ ನೀನು ಅವರಿಗೆ ಸುಲಿಗೆ ಯಾಗುವಿ.
8ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು; ಮನುಷ್ಯರ ರಕ್ತಕ್ಕಾಗಿ ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಬಲಾತ್ಕಾರದ ನಿಮಿತ್ತವೇ.
9ತನ್ನ ಗೂಡನ್ನು ಉನ್ನತದಲ್ಲಿ ಇಡುವ ಹಾಗೆಯೂ ಕೇಡಿನ ಕೈಗೆ ತಪ್ಪಿಸಿಕೊಳ್ಳುವ ಹಾಗೆಯೂ ತನ್ನ ಮನೆ ಗೋಸ್ಕರ ದುರ್ಲಾಭವನ್ನು ಆಶಿಸುವವನಿಗೆ ಅಯ್ಯೋ!
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ