ಲೂಕನು 16:5

ಹೀಗೆ ಅವನು ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದು ಮೊದಲನೆಯವನಿಗೆ--ನೀನು ನನ್ನ ಯಜಮಾನನಿಗೆ ಸಲ್ಲಿಸಬೇಕಾದದ್ದು ಎಷ್ಟು ಎಂದು ಕೇಳಲು

ಸಂದರ್ಭದೊಂದಿಗೆ ಓದಿ · ಲೂಕನು 16

3ಆಗ ಆ ಮನೆವಾರ್ತೆಯವನು ತನ್ನೊಳಗೆ--ನಾನೇನು ಮಾಡಲಿ? ಯಾಕಂದರೆ ನನ್ನ ಯಜಮಾನನು ನನ್ನನ್ನು ಮನೆವಾರ್ತೆಯ ಕೆಲಸದಿಂದ ತೆಗೆದುಬಿಡು ತ್ತಾನೆ; ನಾನು ಅಗೆಯಲಾರೆನು, ಭಿಕ್ಷೆ ಬೇಡುವದಕ್ಕೆ ನಾನು ನಾಚಿಕೊಳ್ಳುತ್ತೇನೆ.

4ಮನೆವಾರ್ತೆಯ ಕೆಲಸ ದಿಂದ ನನ್ನನ್ನು ತೆಗೆದ ಮೇಲೆ ಅವರು ನನ್ನನ್ನು ತಮ್ಮ ಮನೆಗಳಲ್ಲಿ ಸೇರಿಸಿಕೊಳ್ಳುವಂತೆ ನಾನು ಮಾಡಬೇಕಾ ದದ್ದನ್ನು ನಿರ್ಧರಿಸಿದ್ದೇನೆ ಎಂದು ಅಂದುಕೊಂಡನು.

5ಹೀಗೆ ಅವನು ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದು ಮೊದಲನೆಯವನಿಗೆ--ನೀನು ನನ್ನ ಯಜಮಾನನಿಗೆ ಸಲ್ಲಿಸಬೇಕಾದದ್ದು ಎಷ್ಟು ಎಂದು ಕೇಳಲು

6ಅವನು--ಒಂದು ನೂರು ಅಳತೆ ಎಣ್ಣೆ ಅಂದನು. ಆಗ ಅವನು--ನಿನ್ನ ಬೆಲೆ ಪಟ್ಟಿಯನ್ನು ತೆಗೆದುಕೋ, ಮತ್ತು ಬೇಗ ಕೂತುಕೊಂಡು ಐವತ್ತು ಎಂದು ಬರೆ ಎಂದು ಅವನಿಗೆ ಹೇಳಿದನು.

7ಇದಲ್ಲದೆ ಅವನು ಮತ್ತೊಬ್ಬನಿಗೆ--ನೀನು ಸಲ್ಲಿಸಬೇಕಾದದ್ದು ಎಷ್ಟು? ಅನ್ನಲು ಅವನು--ಒಂದು ನೂರು ಅಳತೆ ಗೋಧಿ ಅಂದನು. ಆಗ ಅವನು--ನಿನ್ನ ಬೆಲೆ ಪಟ್ಟಿ ಯನ್ನು ತೆಗೆದುಕೊಂಡು ಎಂಭತ್ತು ಎಂದು ಬರೆ ಅಂದನು.

ಲೂಕನು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी