ಅರಣ್ಯದಲ್ಲಿ ಮೂರು ದಿನಗಳು ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಆತನ ಅಪ್ಪಣೆಯಂತೆ ಯಜ್ಞಮಾಡುವೆವು ಎಂದು ಹೇಳಿದನು.
25ಆಗ ಫರೋಹನು ಮೋಶೆ ಆರೋನರನ್ನು ಕರೆ ಯಿಸಿ ಅವರಿಗೆ--ನೀವು ಹೋಗಿ ದೇಶದಲ್ಲಿಯೇ ನಿಮ್ಮ ದೇವರಿಗೆ ಯಜ್ಞವನ್ನರ್ಪಿಸಿರಿ ಅಂದನು.
26ಆದರೆ ಮೋಶೆಯು ಫರೋಹನಿಗೆ--ಹಾಗೆ ಮಾಡುವದು ಯುಕ್ತವಲ್ಲ, ನಮ್ಮ ಕರ್ತನಾದ ದೇವರಿಗೆ ಯಜ್ಞವನ್ನ ರ್ಪಿಸುವದು ಐಗುಪ್ತ್ಯರಿಗೆ ಅಸಹ್ಯವಾಗಿದೆ; ಇಗೋ, ಐಗುಪ್ತ್ಯರಿಗೆ ಅಸಹ್ಯವಾಗಿರುವದನ್ನು ಅವರ ಕಣ್ಣೆ ದುರಿಗೆ ಅರ್ಪಿಸಿದರೆ ಅವರು ನಮಗೆ ಕಲ್ಲೆಸೆದಾರು.
27ಅರಣ್ಯದಲ್ಲಿ ಮೂರು ದಿನಗಳು ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಆತನ ಅಪ್ಪಣೆಯಂತೆ ಯಜ್ಞಮಾಡುವೆವು ಎಂದು ಹೇಳಿದನು.
28ಅದಕ್ಕೆ ಫರೋಹನು ಅವರಿಗೆ--ನಿಮ್ಮ ದೇವರಾದ ಕರ್ತನಿಗೆ ಅರಣ್ಯದಲ್ಲಿ ಯಜ್ಞವನ್ನರ್ಪಿಸುವಂತೆ ನಿಮ್ಮನ್ನು ಕಳುಹಿ ಸುತ್ತೇನೆ; ಆದರೆ ದೂರ ಹೋಗಬೇಡಿರಿ; ನನಗೋಸ್ಕರ ಪ್ರಾರ್ಥನೆ ಮಾಡಿರಿ ಅಂದನು.
29ಆಗ ಮೋಶೆಯು ಅವನಿಗೆ--ಇಗೋ, ನಾನು ನಿನ್ನನ್ನು ಬಿಟ್ಟುಹೋಗಿ ಕರ್ತನಿಗೆ ಪ್ರಾರ್ಥನೆ ಮಾಡುವೆನು. ನೊಣಗಳು ನಾಳೆ ಫರೋಹನನ್ನೂ ಅವನ ಸೇವಕರನ್ನೂ ಅವನ ಜನರನ್ನೂ ಬಿಟ್ಟುಹೋಗುವವು. ಆದರೆ ಕರ್ತನಿಗೆ ಯಜ್ಞವನ್ನರ್ಪಿಸುವದಕ್ಕೆ ಫರೋಹನು ಜನರನ್ನು ಕಳು ಹಿಸದೆ ಇನ್ನು ಮೇಲೆ ವಂಚಿಸಬಾರದು ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ