ಯೆರೆಮಿಯ 35:18

ರೇಕಾಬ್ಯರ ಮನೆಯವರಿಗೆ ಯೆರೆವಿಾಯನು ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನೀವು ನಿಮ್ಮ ಪಿತೃಗಳಾದ ಯೋನಾದಾಬನ ಆಜ್ಞೆ ಯನ್ನು ಕೇಳಿ ಅವನ ಆಜ್ಞೆಗಳನೆಲ್ಲಾ ಕೈಕೊಂಡು ಅವನು ನಿಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾಡಿದ್ದರಿಂದ,

ಸಂದರ್ಭದೊಂದಿಗೆ ಓದಿ · ಯೆರೆಮಿಯ 35

16ಆದುದರಿಂದ ತಮ್ಮ ಪಿತೃಗಳು ತಮಗೆ ಆಜ್ಞಾಪಿಸಿದ ಆಜ್ಞೆಯನ್ನು ರೇಕಾಬಿನ ಮಗನಾದ ಯೋನಾದಾಬನ ಕುಮಾರರು ಅನುಸರಿಸಿದ್ದರಲ್ಲಿ ಈ ಜನರು ನನ್ನ ಮಾತನ್ನು ಕೇಳದೆ ಹೋದದರಿಂದಲೂ

17ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರಾದ ಕರ್ತನೂ ಹೇಳುವದೇನಂದರೆ--ಇಗೋ, ನಾನು ಯೆಹೂದದ ಮೇಲೆಯೂ ಯೆರೂಸಲೇಮಿನ ನಿವಾಸಿ ಗಳೆಲ್ಲರ ಮೇಲೆಯೂ ಅವರ ವಿಷಯವಾಗಿ ಹೇಳಿದ ಕೇಡನ್ನೆಲ್ಲಾ ಬರಮಾಡುತ್ತೇನೆ; ನಾನು ಅವರ ಸಂಗಡ ಮಾತನಾಡುವಾಗ ಅವರು ಕೇಳಲಿಲ್ಲ ಅವರನ್ನು ಕರೆಯು ವಾಗ ಉತ್ತರ ಕೊಡಲಿಲ್ಲ.

18ರೇಕಾಬ್ಯರ ಮನೆಯವರಿಗೆ ಯೆರೆವಿಾಯನು ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನೀವು ನಿಮ್ಮ ಪಿತೃಗಳಾದ ಯೋನಾದಾಬನ ಆಜ್ಞೆ ಯನ್ನು ಕೇಳಿ ಅವನ ಆಜ್ಞೆಗಳನೆಲ್ಲಾ ಕೈಕೊಂಡು ಅವನು ನಿಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾಡಿದ್ದರಿಂದ,

19ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ರೇಕಾಬನ ಮಗನಾದ ಯೋನಾ ದಾಬ ಸಂತಾನದವರೊಳಗೆ ನನ್ನ ಮುಂದೆ ನಿಲ್ಲತಕ್ಕ ಮನುಷ್ಯನು ಎಂದಿಗೂ ಇಲ್ಲದೆ ಹೋಗುವದಿಲ್ಲ.

ಯೆರೆಮಿಯ 35 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी