ಕೊಲೊಸ್ಸೆಯವರಿಗೆ 1:20

ಆತನ ಶಿಲುಬೆಯ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಆತನಿಂದ ಭೂಪರ ಲೋಕಗಳಲ್ಲಿರುವ ಎಲ್ಲವುಗಳನ್ನು ಆತನ ಮೂಲಕ ತನಗೆ ಸಂಧಾನಪಡಿಸಿಕೊಂಡನು.

ಸಂದರ್ಭದೊಂದಿಗೆ ಓದಿ · ಕೊಲೊಸ್ಸೆಯವರಿಗೆ 1

18ಸಭೆಯೆಂಬ ದೇಹಕ್ಕೆ ಆತನು ಶಿರಸ್ಸಾಗಿದ್ದಾನೆ. ಆತನೇ ಆದಿಯಾಗಿದ್ದು ಎಲ್ಲಾದರಲ್ಲಿ ಪ್ರಮುಖನಾಗಿರುವಂತೆ ಆತನು ಸತ್ತವರೊಳಗಿಂದ ಬಂದ ಜ್ಯೇಷ್ಠನೂ ಆಗಿದ್ದಾನೆ.

19ಆತನಲ್ಲಿ ಸರ್ವ ಸಂಪೂರ್ಣತೆಯು ವಾಸವಾಗಿರುವದು ತಂದೆಗೆ ಇಷ್ಟ ವಾಗಿತ್ತು.

20ಆತನ ಶಿಲುಬೆಯ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಆತನಿಂದ ಭೂಪರ ಲೋಕಗಳಲ್ಲಿರುವ ಎಲ್ಲವುಗಳನ್ನು ಆತನ ಮೂಲಕ ತನಗೆ ಸಂಧಾನಪಡಿಸಿಕೊಂಡನು.

21ಇದಲ್ಲದೆ ನೀವು ಹಿಂದಿನ ಕಾಲದಲ್ಲಿ ಅನ್ಯರೂ ದುಷ್ಕೃತ್ಯಗಳಿಂದ ದ್ವೇಷ ಮನಸ್ಸುಳ್ಳವರೂ ಆಗಿದ್ದಿರಿ. ಆದಾಗ್ಯೂ ಈಗ ಆತನು ನಿಮ್ಮನ್ನು ಸಂಧಾನಪಡಿಸಿ ಕೊಂಡಿದ್ದಾನೆ.

22ತನ್ನ ಸ್ಥೂಲ ದೇಹದಲ್ಲಿ ಉಂಟಾದ ಮರಣದ ಮೂಲಕ ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ನಿರಪರಾಧಿಗಳನ್ನಾಗಿಯೂ ತನ್ನ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂದಿದ್ದಾನೆ.

ಕೊಲೊಸ್ಸೆಯವರಿಗೆ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी