೧ ಪೇತ್ರನು 3:13

ನೀವು ಒಳ್ಳೇದನ್ನು ಅನುಸರಿಸುವವರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?

ಸಂದರ್ಭದೊಂದಿಗೆ ಓದಿ · ೧ ಪೇತ್ರನು 3

11ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲಿ; ಸಮಾಧಾನವನ್ನು ಹುಡುಕಿ ಅದಕ್ಕೋಸ್ಕರ ಪ್ರಯತ್ನಪಡಲಿ.

12ಕರ್ತನ ದೃಷ್ಟಿ ನೀತಿವಂತರ ಮೇಲಿದೆ. ಆತನು ಅವರ ಪ್ರಾರ್ಥನೆಗಳಿಗೆ ಕಿವಿ ಗೊಡುತ್ತಾನೆ; ಕೆಟ್ಟದ್ದನ್ನು ಮಾಡುವವರಿಗೆ ಕರ್ತನ ಮುಖವು ವಿರೋಧವಾಗಿದೆ.

13ನೀವು ಒಳ್ಳೇದನ್ನು ಅನುಸರಿಸುವವರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?

14ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ಸಂತೋಷವುಳ್ಳವರು. ಅವರ ಬೆದರಿಸುವಿಕೆಗೆ ಹೆದರಬೇಡಿರಿ ಮತ್ತು ಕಳವಳ ಪಡಬೇಡಿರಿ.

15ಆದರೆ ದೇವರಾದ ಕರ್ತನನ್ನು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಸಾತ್ವಿಕತ್ವ ದಿಂದಲೂ ಭಯದಿಂದಲೂ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರ್ರಿ;

೧ ಪೇತ್ರನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी