ಮಂದಿರದ ಮುಂದಿನ ಭಾಗವು ನಾಲ್ವತ್ತು ಮೊಳ ಉದ್ದವಾಗಿತ್ತು.
15ಮನೆಯ ಗೋಡೆಗಳ ಒಳಭಾಗಕ್ಕೆ ಮಂದಿ ರದ ನೆಲ ಮೊದಲುಗೊಂಡು ಗೋಡೆಗಳ ಮೇಲೆ ಮಾಳಿಗೆಯ ವರೆಗೂ ದೇವದಾರು ಹಲಿಗೆಗಳಿಂದ ಕಟ್ಟಿಸಿದನು; ಒಳ ಭಾಗದಲ್ಲಿ ಮರದಿಂದ ಮುಚ್ಚಿ ಮನೆಯ ನೆಲಕ್ಕೆ ತುರಾಯಿ ಮರಗಳ ಹಲಿಗೆಗಳಿಂದ ಮುಚ್ಚಿದನು.
16ಅವನು ಮನೆಯ ಪಾರ್ಶ್ವಗಳಲ್ಲಿ ಇಪ್ಪತ್ತು ಮೊಳ ನೆಲವನ್ನೂ ಗೋಡೆಗಳನ್ನೂ ದೇವ ದಾರುಗಳ ಹಲಿಗೆಗಳಿಂದ ಕಟ್ಟಿಸಿದನು. ಅವುಗಳನ್ನು ಒಳ ಭಾಗದಲ್ಲಿ ಮಹಾ ಪರಿಶುದ್ಧವಾದ ದೈವೋಕ್ತಿಯ ಸ್ಥಾನವಾಗಿ ಕಟ್ಟಿಸಿದನು.
17ಮಂದಿರದ ಮುಂದಿನ ಭಾಗವು ನಾಲ್ವತ್ತು ಮೊಳ ಉದ್ದವಾಗಿತ್ತು.
18ಮಂದಿ ರದ ಒಳಗಿರುವ ದೇವದಾರು ಮೊಗ್ಗುಗಳೂ ವಿಕಸಿ ಸಿದ ಪುಷ್ಪಗಳೂ ಕೆತ್ತಿದ ಕೆಲಸವಾಗಿದ್ದವು. ಒಂದು ಕಲ್ಲಾದರೂ ಕಾಣಿಸದ ಹಾಗೆ ಅವೆಲ್ಲಾ ದೇವದಾರ ದ್ದಾಗಿತ್ತು.
19ಕರ್ತನ ಒಡಂಬಡಿಕೆಯ ಮಂಜೂಷವನ್ನು ಅಲ್ಲಿ ಇರಿಸುವದಕ್ಕೆ ಮನೆಯೊಳಗೆ ದೈವೋಕ್ತಿಯ ಸ್ಥಾನವನ್ನು ಸಿದ್ಧಮಾಡಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ