ಬಾಷನು ತನ್ನ ಪಿತೃಗಳ ಸಂಗಡ ಮಲಗಿದನು; ತಿರ್ಚದಲ್ಲಿ ಅವನು ಹೂಣಿಡಲ್ಪಟ್ಟನು; ಅವನ ಮಗನಾದ ಏಲನು ಅವನಿಗೆ ಬದಲಾಗಿ ಆಳಿ ದನು.
4ಬಾಷನ ಕಡೆಯವನಲ್ಲಿ ಪಟ್ಟಣದೊಳಗೆ ಸಾಯುವ ವನನ್ನು ನಾಯಿಗಳು ತಿನ್ನುವವು. ಅವನ ಕಡೆಯವನಲ್ಲಿ ಹೊಲದೊಳಗೆ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು.
5ಆದರೆ ಬಾಷನ ಇತರ ಕಾರ್ಯಗಳೂ ಅವನು ಮಾಡಿದ್ದೂ ಅವನ ಪರಾಕ್ರಮವೂ ಇಸ್ರಾ ಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯ ಲ್ಪಡಲಿಲ್ಲವೋ?
6ಬಾಷನು ತನ್ನ ಪಿತೃಗಳ ಸಂಗಡ ಮಲಗಿದನು; ತಿರ್ಚದಲ್ಲಿ ಅವನು ಹೂಣಿಡಲ್ಪಟ್ಟನು; ಅವನ ಮಗನಾದ ಏಲನು ಅವನಿಗೆ ಬದಲಾಗಿ ಆಳಿ ದನು.
7ಇದಲ್ಲದೆ ಬಾಷನು ಯಾರೂಬ್ಬಾಮನ ಮನೆ ಯವರ ಹಾಗಿದ್ದು ಅವನನ್ನು ಕೊಂದುಹಾಕಿ ತನ್ನ ದುಷ್ಕೃತ್ಯಗಳಿಂದ ಕರ್ತನಿಗೆ ಕೋಪವನ್ನು ಎಬ್ಬಿಸಿ ಕರ್ತನ ಸಮ್ಮುಖದಲ್ಲಿ ತಾನು ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ಅವನಿಗೆ ವಿರೋಧವಾಗಿಯೂ ಅವನ ಮನೆಗೆ ವಿರೋಧವಾಗಿಯೂ ಹನಾನೀಯ ಮಗನಾಗಿರುವ ಪ್ರವಾದಿಯಾದ ಯೇಹುವಿನ ಮುಖಾಂತರ ಕರ್ತನ ವಾಕ್ಯ ಉಂಟಾಯಿತು.
8ಯೆಹೂದದ ಅರಸನಾದ ಆಸನ ಇಪ್ಪತ್ತಾರನೇ ವರುಷದಲ್ಲಿ ಬಾಷನ ಮಗನಾದ ಏಲನು ಇಸ್ರಾಯೇ ಲಿನ ಮೇಲೆ ತಿರ್ಚದಲ್ಲಿ ಎರಡು ವರುಷ ಆಳಲಾರಂಭಿ ಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ