ಆದಿಕಾಂಡ 30:13

ಆಗ ಲೇಯಳು--ನಾನು ಧನ್ಯಳಾದೆನು. ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯು ವರು ಎಂದು ಹೇಳಿ ಅವನಿಗೆ ಆಶೇರ್‌ ಎಂದು ಹೆಸರಿಟ್ಟಳು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 30

11ಆಗ ಲೇಯಳು--ಒಂದು ಸೈನ್ಯ ಬರುತ್ತದೆ ಎಂದು ಹೇಳಿ ಅವನಿಗೆ ಗಾದ್‌ ಎಂದು ಹೆಸರಿಟ್ಟಳು.

12ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು.

13ಆಗ ಲೇಯಳು--ನಾನು ಧನ್ಯಳಾದೆನು. ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯು ವರು ಎಂದು ಹೇಳಿ ಅವನಿಗೆ ಆಶೇರ್‌ ಎಂದು ಹೆಸರಿಟ್ಟಳು.

14ರೂಬೇನನು ಗೋದಿ ಕೊಯ್ಯುವ ಕಾಲದಲ್ಲಿ ಹೋಗಿ ಹೊಲದಲ್ಲಿ ದುದಾಯಗಳನ್ನು ಕಂಡು ತಾಯಿಯಾದ ಲೇಯಳ ಬಳಿಗೆ ತಂದಾಗ ರಾಹೇಲಳು ಲೇಯಳಿಗೆ--ನಿನ್ನ ಮಗನ ದುದಾಯಗಳಲ್ಲಿ ಕೆಲವನ್ನು ನನಗೆ ಕೊಡು ಅಂದಳು.

15ಅದಕ್ಕೆ ಆಕೆಯು--ನೀನು ನನ್ನ ಗಂಡನನ್ನು ತಕ್ಕೊಂಡದ್ದು ಅಲ್ಪಕಾರ್ಯವೋ? ನೀನು ಈಗ ನನ್ನ ಮಗನು ತಂದ ದುದಾಯಗಳನ್ನು ಸಹ ತಕ್ಕೊಳ್ಳುವಿಯೋ ಅಂದಾಗ ರಾಹೇಲಳು--ಆದದರಿಂದ ನಿನ್ನ ಮಗನು ತಂದ ದುದಾಯಗಳಿ ಗೋಸ್ಕರ ಯಾಕೋಬನು ಈ ರಾತ್ರಿ ನಿನ್ನ ಸಂಗಡ ಮಲಗಲಿ ಅಂದಳು.

ಆದಿಕಾಂಡ 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी