ಅರಣ್ಯಕಾಂಡ 35:30

ಪ್ರಾಣಹತ್ಯ ಮಾಡುವ ಕೊಲೆಪಾತಕನನ್ನು ಸಾಕ್ಷಿಗಳ ಬಾಯಿಯ ಪ್ರಕಾರ ಕೊಲ್ಲಬೇಕು; ಸಾಯುವ ಹಾಗೆ ಯಾವ ಮನುಷ್ಯನಿಗಾದರೂ ವಿರೋಧವಾಗಿ ಒಬ್ಬನು ಸಾಕ್ಷಿ ಹೇಳಬಾರದು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 35

28ಅವನು ತನ್ನ ಆಶ್ರಯದ ಪಟ್ಟಣದ ಪ್ರಧಾನಯಾಜಕನು ಸಾಯುವ ವರೆಗೂ ವಾಸಮಾಡ ಬೇಕಾಗಿತ್ತು; ಪ್ರಧಾನ ಯಾಜಕನ ಮರಣದ ತರು ವಾಯ ಕೊಲೆಪಾತಕನು ತನ್ನ ಸ್ವಾಸ್ತ್ಯದ ದೇಶಕ್ಕೆ ಹೋಗಬಹುದು.

29ಹೀಗೆ ಇವು ನಿಮ್ಮ ಸಮಸ್ತ ನಿವಾಸಗಳಲ್ಲಿ ನಿಮ್ಮ ಸಂತತಿಗಳಿಗೆಲ್ಲಾ ನ್ಯಾಯದ ಕಟ್ಟಳೆಗಳಾಗಿರಬೇಕು.

30ಪ್ರಾಣಹತ್ಯ ಮಾಡುವ ಕೊಲೆಪಾತಕನನ್ನು ಸಾಕ್ಷಿಗಳ ಬಾಯಿಯ ಪ್ರಕಾರ ಕೊಲ್ಲಬೇಕು; ಸಾಯುವ ಹಾಗೆ ಯಾವ ಮನುಷ್ಯನಿಗಾದರೂ ವಿರೋಧವಾಗಿ ಒಬ್ಬನು ಸಾಕ್ಷಿ ಹೇಳಬಾರದು.

31ಸಾಯತಕ್ಕ ಕೊಲೆ ಪಾತಕನ ಪ್ರಾಣಕ್ಕೋಸ್ಕರ ಈಡನ್ನು ತಕ್ಕೊಳ್ಳಬೇಡಿರಿ; ಯಾಕಂದರೆ ಅವನು ನಿಜವಾಗಿಯೂ ಸಾಯಬೇಕು.

32ತನ್ನ ಆಶ್ರಯದ ಪಟ್ಟಣಕ್ಕೆ ಓಡಿಹೋದವನಿ ಗೋಸ್ಕರ ಅವನು ತಿರಿಗಿ ಬಂದು ಯಾಜಕನು ಸಾಯುವ ವರೆಗೂ ಸ್ವದೇಶದಲ್ಲಿ ವಾಸಮಾಡುವ ಹಾಗೆ ಈಡನ್ನು ತಕ್ಕೊಳ್ಳಬೇಡಿರಿ.

ಅರಣ್ಯಕಾಂಡ 35 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी