ನೆಹೆಮಿಯ 10:38

ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ಮಗನಾದ ಯಾಜ ಕನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತರಲ್ಲೊಂದು ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಠಡಿಗಳ ಬಳಿಯ ಬೊಕ್ಕಸದ ಮನೆಗೆ ತರಬೇಕು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 10

36ನ್ಯಾಯಪ್ರಮಾಣದಲ್ಲಿ ಬರೆದಿರುವ ಹಾಗೆ ನಮ್ಮ ಕುಮಾರರಲ್ಲಿಯೂ ಪಶುಗಳಲ್ಲಿಯೂ ಚೊಚ್ಚಲಾದ ವುಗಳನ್ನು ದನಗಳಲ್ಲಿಯೂ ಮಂದೆಗಳಲ್ಲಿಯೂ ಚೊಚ್ಚ ಲಾದವುಗಳನ್ನು ದೇವರ ಆಲಯಕ್ಕೆ ಸೇವಿಸುವ ಯಾಜ ಕರ ಬಳಿಗೆ ತರುವೆವು;

37ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನೂ ನಮ್ಮ ಕಾಣಿಕೆಗಳನ್ನೂ ಸಕಲ ಮರಗಳ ಫಲವನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುವದಕ್ಕೂ; ಲೇವಿಯರು ಒಕ್ಕಲುತನದವರಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವದಕ್ಕೂ ಪ್ರಮಾಣಮಾಡಿದೆವು.

38ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ಮಗನಾದ ಯಾಜ ಕನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತರಲ್ಲೊಂದು ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಠಡಿಗಳ ಬಳಿಯ ಬೊಕ್ಕಸದ ಮನೆಗೆ ತರಬೇಕು.

39ಪರಿಶುದ್ಧ ಸ್ಥಾನದ ಪಾತ್ರೆಗಳೂ ಸೇವೆಮಾಡುವ ಯಾಜಕರೂ ದ್ವಾರಪಾಲಕರೂ ಹಾಡುಗಾರರೂ ಇರುವ ಕೊಠಡಿಗಳಿಗೆ ಇಸ್ರಾಯೇಲ್‌ ಮಕ್ಕಳೂ ಲೇವಿಯರ ಮಕ್ಕಳೂ ಕಾಣಿಕೆಯಾದ ಧಾನ್ಯವನ್ನೂ ದ್ರಾಕ್ಷೇರಸವನ್ನೂ ಎಣ್ಣೆಯನ್ನೂ ತರಬೇಕು. ನಾವು ನಮ್ಮ ದೇವರ ಆಲಯವನ್ನು ಮರೆತು ಬಿಡುವುದಿಲ್ಲ ಅಂದರು.

ನೆಹೆಮಿಯ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी