ಆದಿಕಾಂಡ 15:15

ನೀನಾದರೋ ಸಮಾಧಾನದಿಂದ ನಿನ್ನ ತಂದೆಗಳ ಬಳಿಗೆ ಹೋಗುವಿ; ಬಹಳ ಮುದಿಪ್ರಾಯದವನಾಗಿ (ಮೃತಿ ಹೊಂದಿ) ಹೂಣಲ್ಪಡುವಿ.

ಸಂದರ್ಭದೊಂದಿಗೆ ಓದಿ · ಆದಿಕಾಂಡ 15

13ಆಗ ಆತನು ಅಬ್ರಾಮನಿಗೆ--ನಿನ್ನ ಸಂತತಿ ಯವರು ತಮ್ಮದಲ್ಲದ ದೇಶದಲ್ಲಿ ಪರದೇಶಿಗಳಾಗಿದ್ದು ಅವರನ್ನು ಸೇವಿಸುವರು. ಅವರು ನಾನೂರು ವರುಷ ಗಳು ನಿನ್ನ ಸಂತತಿಯವರನ್ನು ಶ್ರಮೆಪಡಿಸುವರು ಎಂದು ನೀನು ಖಂಡಿತವಾಗಿಯೂ ತಿಳಿಯತಕ್ಕದ್ದು.

14ಅವರು ಸೇವಿಸುವ ಜನಾಂಗಕ್ಕೆ ನಾನೇ ನ್ಯಾಯ ತೀರಿಸುವೆನು; ತರುವಾಯ ಮಹಾ ಸಂಪತ್ತಿನೊಂದಿಗೆ ಅವರು ಹೊರಗೆ ಬರುವರು.

15ನೀನಾದರೋ ಸಮಾಧಾನದಿಂದ ನಿನ್ನ ತಂದೆಗಳ ಬಳಿಗೆ ಹೋಗುವಿ; ಬಹಳ ಮುದಿಪ್ರಾಯದವನಾಗಿ (ಮೃತಿ ಹೊಂದಿ) ಹೂಣಲ್ಪಡುವಿ.

16ಆದರೆ ನಾಲ್ಕನೆಯ ಸಂತಾನದಲ್ಲಿ ಅವರು ತಿರಿಗಿ ಬರುವರು; ಅಮೋರಿಯರ ದುಷ್ಟತನವು ಇನ್ನೂ ಪೂರ್ತಿಯಾಗಲಿಲ್ಲ ಎಂದು ಹೇಳಿದನು.

17ಸೂರ್ಯನು ಮುಳುಗಿದ ಮೇಲೆ ಕತ್ತಲಾದಾಗ ಇಗೋ, ಹೊಗೆಹಾಯುವ ಒಲೆಯೂ ಉರಿಯುವ ದೀಪವೂ ತುಂಡುಗಳ ಮಧ್ಯದಲ್ಲಿ ಹಾದುಹೋದವು.

ಆದಿಕಾಂಡ 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी